ಬಂಟ್ವಾಳ : ಕ್ವಾಲಿಟಿ ಫ್ರೆಂಡ್ಸ್ ಮಾಣಿ ಇದರ ವತಿಯಿಂದ ಎರಡನೇ ವರ್ಷದ ಕ್ವಾಲಿಟಿ ಕ್ರೀಡೋತ್ಸವ-2017 ಎಪ್ರಿಲ್ 29 ರಂದು ಮಾಣಿ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಹೊನಲು ಬೆಳಕಿನಲ್ಲಿ ನಡೆಯುವ ಈ ಕ್ರೀಡೋತ್ಸವದಲ್ಲಿ ಆಹ್ವಾನಿತ ತಂಡಗಳ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ, ಮುಕ್ತ ವಿಭಾಗದಲ್ಲಿ ಕ್ರಿಕೆಟ್ ಹಾಗೂ ಹಗ್ಗ-ಜಗ್ಗಾಟ (350 ಕೆಜಿ, 5+1 ಗ್ರಿಪ್) ಪಂದ್ಯಾಟಗಳು ನಡೆಯಲಿದೆ.

ಕ್ರೀಡೋತ್ಸವದ ಅಧ್ಯಕ್ಷತೆಯನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಹಿಸಲಿದ್ದು, ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಉದ್ಘಾಟಿಸುವರು. ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿ.ಪಂ. ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾವೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಪ್ರಥಮ ರೂ. 10,017/-, ದ್ವಿತೀಯ ರೂ. 7,017/-, ತೃತೀಯ ರೂ. 5,017/-, ಚತುರ್ಥ ರೂ. 3,017/- ಹಾಗೂ ಶಾಶ್ವತ ಫಲಕ, ಕ್ರಿಕೆಟ್ ಪಂದ್ಯಾಟದ ವಿಜೇತ ತಂಡಕ್ಕೆ ಪ್ರಥಮ ರೂ. 10,017/-, ದ್ವಿತೀಯ ರೂ. 5,017/- ಹಾಗೂ ಶಾಶ್ವತ ಫಲಕ, ಹಗ್ಗ-ಜಗ್ಗಾಟ ವಿಜೇತರಿಗೆ ಪ್ರಥಮ ರೂ. 5,017/-, ದ್ವಿತೀಯ ರೂ. 3,017/-, ತೃತೀಯ ರೂ. 2,017/-, ಚತುರ್ಥ ರೂ. 1,017/- ಮತ್ತು ಶಾಶ್ವತ ಫಲಕ ಹಾಗೂ ಎಲ್ಲಾ ಪಂದ್ಯಾಟಗಳಲ್ಲಿ ವೈಯುಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *