ಬಂಟ್ವಾಳ: ಅಮ್ಟೂರು ಗ್ರಾಮದ ವಿಶಾಂತಿಕೋಡಿ ಎಂಬಲ್ಲಿ ಖದೀಂ ವರ್ಗ ಕೃಷಿ ಭೂಮಿಯಲ್ಲಿ ಧಫನ ಭೂಮಿ ನಿರ್ಮಿಸುವ ಉದ್ದೇಶದಿಂದ ರಾಜಕೀಯ ಪ್ರೇರಣೆ ಹಾಗೂ ಆಮಿಷಕ್ಕೊಳಗಾಗಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಬಂಟ್ವಾಳ ತಹಶೀಲ್ದಾರರು ಜಮೀನಿ ಸ್ವಾಧೀನ ಪಡಿಸುವ ನೆಪದಿಂದ ಕಿರುಕುಳ ಹಾಗೂ ಮಾನಸಿಕ ಆಘಾತ ನೀಡುತ್ತಿರುವ ವಿರುದ್ದ ಸಂತ್ರಸ್ತೆ ಶಶಿಕಲಾ ರಾವ್ ರಾಜ್ಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಜಮೀನಿನ ವ್ಯಾಜ್ಯದ ಬಗ್ಗೆ ಈಗಾಗಗಲೇ ಬಂಟ್ವಾಳ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಇದ್ದರೂ ಕೂಡ ರಾಜಕೀಯ ಪ್ರಭಾವಕ್ಕೊಳಗಾಗಿ ಬಂಟ್ವಾಳ ತಹಸೀಲ್ದರರು ಮಹಿಳೆಯ ವಿರುದ್ದ ದೌರ್ಜನ್ಯ ಎಸಗುತ್ತಿದ್ದರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿರುವ ಶಶಿಕಲ ಉಪಾಧ್ಯಾಯ ಎಂಬವರು ಅಮ್ಟೂರು ಗ್ರಾಮದ ವಿಶಂತಿಕೋಡಿ ಸರ್ವೇ ಸಂಖ್ಯೆ 127/4 ಹಾಗೂ 126/2ಕ್ಕೆ ಸಂಬಂಧಪಟ್ಟ ಒಂದೂವರೆ ಎಕರೆ ಕುಮ್ಕಿ ಹಕ್ಕಿನ ಜಮೀನು ಹೊಂದಿದ್ದು ಖಾಸಾ ಸ್ವಾಧೀನದಲ್ಲಿದೆ. ಈ ಹಿಂದೆ ಮಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ 96/1986ರಂತೆ ಇದ್ದ ದಾವೆಯಲ್ಲಿ ಕಮಿಷನರ್ ನೇಮಕವಾಗಿದ್ದು ಅವರು ನೀಡಿದ ವರದಿಯಲ್ಲೂ ಈ ಜಮೀನು ಶಶಿಕಲಾ ಅವರ ಸ್ವಾಧೀನವಿದೆ ಎಂಬ ವಿವರವಿದೆ. ಇದೀಗ ಸ್ಥಳೀಯ ಪಂಚಾಯಿತಿ ಕಾನೂನಿನ್ವಯ ತನ್ನ ಹಕ್ಕಿನ ಜಮೀನನ್ನು ಕಬಳಿಸುವ ಪ್ರಯತ್ನ ನಡೆಸುತ್ತಿದೆ, ಭೂ ಮಾಫಿಯಾದೊಂದಿದೆ ಸೇರಿ ಕೃಷಿ ಭೂಮಿಯನ್ನು ದಫನ ಭೂಮಿ ಮಾಡಲು ತೀರ್ಮಾನಿಸಿದೆ ಎಂದು ಆರೋಪಿಸಿ ರೈತ ಸಂಘದ ನೇತೃತ್ವದಲ್ಲಿ ಈಗಾಗಲೇ ಹೈಕೋರ್ಟ್‍ನಲ್ಲಿ ದಾವೆ ಹೂಡಾಲಾಗಿದೆ. ಆದರೂ ತಹಶೀಲ್ದರ್ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಮೂಲಭೂತ ಹಕ್ಕಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ಬೆಂಬಲಕ್ಕೆ ನಿಂತಿರುವ ರಾಜ್ಯ ರೈತಸಂಘದ ಹಸಿರು ಸೇನೆಯ ದ.ಕ. ಜಿಲ್ಲಾ ಸಮಿತಿ ಅಧಿಕಾರ ವ್ಯಾಪ್ತಿ ಮೀರಿ ತಹಶೀಲ್ದರಾರು ನಡೆದುಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣದ ಬಗ್ಗೆ ಕ್ರಮ ಜರಿಗಿಸುವ ಅಧಿಕಾರ ಇರುವುದು ಜಿಲ್ಲಾಧಿಕಾರಿಗೆ ಮಾತ್ರ. ತಹಶೀಲ್ದರಾರ ಈ ನಡವಳಿಕೆಯ ಬಗ್ಗೆ ರೈತ ಸಂಘ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದ್ದಾರೆ.

By suddi9

Leave a Reply

Your email address will not be published. Required fields are marked *