ಉಡುಪಿ:- ಯುವ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಯುವ ಸಮಾಜಿಕ ಚಟುವಟಿಕೆಗಳಿಗೆ ವಿಜಯಪುರ ಬಸವ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಇದರ ವತಿಯಿಂದ ನೀಡಲಾಗುವ ಯುವ ಸ್ಪಂದನ ರಾಜ್ಯ ಪ್ರಶಸ್ತಿಯನ್ನು ಎ.2 ರಂದು ವಿಜಯಪುರದ ಹನುಮಂತರಾಯ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ,ಮಾಜಿ ಕೇಂದ್ರ ಸಚಿವ ಎಂ ರಾಜಶೇಖರನ್,ಮಾಜಿ ಸಚಿವ ಎಂ.ಪಿ ನಾಡಗೌಡ,ವಿಶ್ರಾಂತ ಉಚ್ಚ ನ್ಯಾಯಾಲಯದ ನ್ಯಾಯಾಧಿಶ ಅರಳಿ ನಾಗರಾಜ,ಚಲನಚಿತ್ರ ನಟಿ ಶೃತಿ,ಮುಂತಾದವರು ಭಾಗವಹಿಸಿದ್ದರು.
