ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಹೋಮಿಯೋಪಥಿ ಕಾಲೇಜಿನಲ್ಲಿ ವಿಶ್ವ ಹೋಮಿಯೋಪಥಿ ದಿನವನ್ನು ಆಚರಿಸಲಾಯಿತು.
ನವದೆಹಲಿಯ ಕೇಂದ್ರ ಹೋಮಿಯೋಪಥಿ ಮಂಡಳಿಯ ಸದಸ್ಯ ಡಾ.ಪ್ರಶೋಬ್ ಕುಮಾರ್ ಕೆ.ಸಿ ಮುಖ್ಯ ಅತಿಥಿಯಾಗಿ, ಹೋಮಿಯೋಪಥಿ ಜನಕ ಡಾ.ಸಾಮ್ಯುವೆಲ್ ಹಾನಿಮನ್ ನಡೆದು ಬಂದ ಹಾದಿಯನ್ನು ಅವಲೋಕಿಸಿದರು. ವಿಶ್ವದ 2ನೇ ಅತೀ ದೊಡ್ಡ ಚಿಕಿತ್ಸಾ ಪದ್ಧತಿಯಾಗಿ ಹೊರಹೊಮ್ಮುತಿ ಹೋಮಿಯೋಪಥಿ ಸಮಕಾಲೀನ ಮಾತ್ರವಲ್ಲ ದೀರ್ಘ ಕಾಲದ ಕಾಯಿಲೆಗಳನ್ನು ಶಮನಗೊಳಿಸುತ್ತದೆ. ಕಾನ್ಸರ್, ಅನುವಂಶೀಯ ರೋಗಗಳನ್ನು ಗುಣಪಡಿಸಬಹುದು ಎಂಬುದನ್ನು ಸಂಶೋಧನೆಗಳನ್ನು ದೃಢಪಡಿಸಿದೆ ಎಂದು ಅಭಿಪ್ರಾಯಪಟ್ಟರು.

ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಯತಿಕುಮಾರ್ ಸ್ವಾಮಿ ಗೌಡ ಮುಖ್ಯ ಅತಿಥಿಯಾಗಿದ್ದರು.
ಡಾ.ಪ್ರವೀಣ್ ರಾಜ್ ಸ್ವಾಗತಿಸಿದರು. ಡಾ.ರೋಶನ್ ಪಿಂಟೋ ವಂದಿಸಿದರು. ಡಾ.ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
