ಮೂಡುಬಿದಿರೆ: ವಂದೇ ಮಾತರಂ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಮೂಡುಬಿದಿರೆ ಪ್ರೇರಣಾ ಸೇವಾ ಟ್ರಸ್ಟ್‍ನಿಂದ ಪ್ರಾಯೋಜಿಲ್ಪಟ್ಟ ಹಂಡೇಲು ಕಾಪಿಕಾಡಿನ ರಾಘವೇಂದ್ರ ಸ್ವಸಹಾಯ ಗುಂಪಿನ ಮೂರನೇ ವಾರ್ಷಿಕೋತ್ಸವ ಹಾಗೂ ಹಿರಿಯ ಕಲಾವಿದಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಿವಲಿಂಗ ಸ್ವಸಹಾಯ ಗುಂಪಿನ ಪ್ರಬಂಧಕಿ ಪುಷ್ಪಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರಗನೃತ್ಯ ಹಿರಿಯ ಕಲಾವಿದ ವೆಂಕಟೇಶ್ ಬಂಗೇರ ಅವರನ್ನು ಸನ್ಮಾನಿಸಲಾಯಿತು. ಗಿರಿಜಾ ಎಂಬವರ ವಿಕಲಚೇತನ ಮಗುವಿಗೆ ಆರ್ಥಿಕ ನೆರವು ನೀಡಲಾಯಿತು.

mbd_april10_2 (1)
ಸಾಹಿತಿ, ವಂದೇ ಮಾತರಂ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಸದಾನಂದ ನಾರಾವಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ವಸಹಾಯ ಗುಂಪುಗಳು ಗ್ರಾಮೀಣ ಪ್ರದೇಶದ ಜನರ ಹಣಕಾಸಿನ ತೊಂದರೆ ನಿವಾರಿಸುವುದು ಮಾತ್ರವಲ್ಲದೇ ಉತ್ತಮ ಸಂಸ್ಕಾರ ನೀಡಿದರೆ ಕುಟುಂಬವನ್ನು ಸಕಾರತ್ಮಕವಾಗಿ ಮುನ್ನಡೆಸಬಹುದು. ಸ್ಥಳೀಯ ಪ್ರತಿಭೆ, ಹಿರಿಯ ಕಲಾವಿದರನ್ನು ಗುರುತಿಸುವ ಮೂಲಕ ಗ್ರಾಮೀಣಮಟ್ಟದಲ್ಲಿ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪತ್ರಕರ್ತ ಯಶೋಧರ ಬಂಗೇರ ಮುಖ್ಯ ಅತಿಥಿಯಾಗಿದ್ದರು. ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಕಾರಯುತ ಜೀವನಕ್ಕೆ ಸ್ವಸಹಾಯ ಗುಂಪುಗಳು ಯಾವ ರೀತಿಯಲ್ಲಿ ಸಹಕಾರಿ ಎಂಬುದನ್ನು ತಿಳಿಸಿದರು.
ಸಂಘದ ಪ್ರಬಂಧಕಿ ಪುಷ್ಪಲತಾ, ಸಂಯೋಜಕಿ ರೀತಾಕ್ಷಿ ಉಪಸ್ಥಿತರಿದ್ದರು.
ಶುಭಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ವಂದಿಸಿದರು.

By suddi9

Leave a Reply

Your email address will not be published. Required fields are marked *