ಕೈಕಂಬ: ಬಡಗಬೆಳ್ಳೂರು ಗ್ರಾಮದ ಕಿರಾಳೆ ಗುತ್ತು ಕುಟುಂಬಿಕರ “ಶ್ರೀ ಕಲ್ಲುರ್ಟಿ ದೈವದ ಕೋಲ ಬಲಿ ಉತ್ಸವ“ವು ಏ.8ರಂದು ಶನಿವಾರ ರಾತ್ರಿ ಕಿರಾಳೆ ಗುತ್ತಿನ ಮನೆಯಲ್ಲಿ ಜರುಗಲಿದೆ.
ಬೆಳಗ್ಗೆ 8.ರಿಂದ ಗಣಹೋಮ , ದ್ವಾರಪೂಜೆ, ಗೃಹಪ್ರವೇಶ,ನಾಗತಂಬಿಲ, ಧೂಮಾವತಿ ಕಲ್ಲುರ್ಟಿ ದೈವಗಳಿಗೆ ನವಕ ಪ್ರಧಾನಹೋಮ, ಶುದ್ಧ ಪರಿವಾರ ದೈವಗಳಿಗೆ ಪರ್ವ ಸೇವೆ ಜರುಗಲಿದೆ ಎಂದು ಕಿರಾಳೆ ಗುತ್ತಿನ ಪ್ರಕಟನೆ ತಿಳಿಸಿದೆ. ವಿ.ಸೂ.ಗುತ್ತಿನ ಮನೆಯ ಜೀರ್ಣೋದ್ಧಾರದ ವಿಷಯದ ಬಗ್ಗೆ ಹಿತೈಷಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು “ಗುತ್ತಿನ ಮನೆ ಕಿರಾಳೆಯಸುತ್ತು ಸುಳಿದನೆನಪು” ಗಳನ್ನು ಮೆಲುಕು ಹಾಕುವ ಮೂಲಕ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ.
