ವಾಮಂಜೂರು: ಬೇಸಗೆ ಶಿಬಿರಗಳು ಮಕ್ಕಳಲ್ಲಿನ ಸೃಜನಶೀಲತೆಯನ್ನು ಮೂಡಿಸಬೇಕು, ಕಲಿಕೆಯ ಪ್ರಕ್ರಿಯೆಯು ಕೇವಲ ಪಾಠ ಪ್ರವಚನಗಳಿಗೆ ಮಾತ್ರ ಮೀಸಲಾಗಿರಬಾರದು. ಕಲಿಕೆಯು ಮಕ್ಕಳಲ್ಲಿ ಜೀವನಪ್ರೀತಿಯನ್ನು ಮೂಡಿಸಿದಾಗ ಕಲಿಕೆ ಸಾರ್ಥಕವಾಗುತ್ತದೆ ಎಂದು ಪ್ರೊ. ರಾಜಶೇಖರ್ ಹೆಬ್ಬಾರ್ ನುಡಿದರು. ಅವರು ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರಿನ ವಿದ್ಯಾರ್ಥಿಗಳಿಗೆ ಚೈತ್ರ ಚಿಗುರು-2017 ಬೇಸಗೆ ಶಿಬಿರ ಕಾರ್ಯಕ್ರಮವು ಏ 3 ರಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ವಿ ಇವರು ವಹಿಸಿದ್ದರು. ಪ್ರಾಥಮಿಕ ವಿಭಗದ ಮುಖ್ಯಸ್ಥರಾದ ಮಾರ್ಯಟ್ ಮಸ್ಕರೇನಸ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೈಸ್ಕೂಲ್ ವಿಭಾಗದ ಮುಖ್ಯಸ್ಥರಾದ ಅಶೋಕ್ ಕುಮಾರ್ ಇವರು ಸ್ವಾಗತಿಸಿದರೆ ಶಿಕ್ಷಕರಾದ ಶ್ರೀ ಗಂಗಾಧರ್ ಇವರು ವಂದಿಸಿದರು. ಮುಂದಿನ ನಾಲ್ಕು ದಿನಗಳ ಕಾಲ ಶಿಬಿರವು ನಡೆಯಲಿದ್ದು ಪ್ರೊ. ರಾಜ್ ಶೇಖರ ಹೆಬ್ಬಾರ್, ಕಿಶನ್ ಪೆರ್ಮಂಕಿ, ಪ್ರಸನ್ನ, ಶಾಲಿನಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
