ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಎನ್.ಸಿ.ಸಿ., ಯುವ ರೆಡ್ ಕ್ರಾಸ್, ಎನ್.ಎಸ್.ಎಸ್. ಹಾಗೂ ರೇಂಜರ್ಸ್ ಘಟಕಗಳು, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಜಂಟಿ ಆಶ್ರಯದಲ್ಲಿ ಏರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ನ ಅಧ್ಯಕ್ಷ ರಾಜೇಶ್ ಶಿಬಿರವನ್ನು ಉದ್ಘಾಟಿಸಿದರು. ಮಂಗಳೂರು ಲೇಡಿಗೊಶನ್ ಆಸ್ಪತ್ರೆ ರಕ್ತನಿಧಿಯ ಅಧಿಕಾರಿ ಎಡ್ವರ್ಡ್ ವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ . ಚಂದ್ರಶೇಖರ ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ . ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ . ಹರೀಶ್, ಎನ್.ಸಿ.ಸಿ. ಅಧಿಕಾರಿ ಮೇಜರ್ ರಾಧಾಕೃಷ್ಣ ಶೆಟ್ಟಿ, ಎನ್.ಎಸ್.ಎಸ್. ಅಧಿಕಾರಿ ಸಂದೇಶ್, ರೆಡ್ ಕ್ರಾಸ್ ಅಧಿಕಾರಿ ಡಾ.ಜಯಲಕ್ಷ್ಮಿ, ರೇಂಜರ್ಸ್ ಅಧಿಕಾರಿ ರಿಯೋನಾ ಪ್ರೀಮಾ ರೇಗೊ ಹಾಗೂ ವಿದ್ಯಾರ್ಥಿ ನಾಯಕ ಅಲಿಸ್ಟರ್ ಲೋಬೋ ಉಪಸ್ಥಿತರಿದ್ದರು. ಸೌರಭ ಸ್ವಾಗತಿಸಿದರು. ಸೂರ್ಯಕಾಂತ್ ಪೈ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
