ಮೂಡುಬಿದಿರೆ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಸಮಾಜ ಬಯಸುವ ಶಿಕ್ಷಣದ ವ್ಯವಸ್ಥೆ, ಸಾಮಾಜಿಕ ಬದ್ಧತೆ ಮತ್ತು ಕಾಪೋರೇಟ್ ಸಂಸ್ಥೆಗಳು ನಿರೀಕ್ಷಿಸುವ ಅವಶ್ಯಕತೆಗಳನ್ನು ಪೂರೈಸುವ ದೃಷ್ಟಿಯಲ್ಲಿ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಬೆಂಗಳೂರಿನ ಆಸ್ಕಿ ಲ್ಯಾಬ್ ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ಆಸ್ಕಿ ಲ್ಯಾಬ್ ವತಿಯಿಂದ ಹದಿನೈದು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಂದ ನವೀನ ರೀತಿಯಲ್ಲಿ ಹೊರಬಂದ ಸ್ಮಾರ್ಟ್ ಐರನ್ ಬಾಕ್ಸ್, ಸ್ಮಾರ್ಟ್ ಹೆಲ್ಮೆಟ್, ಫುಡ್ ಸ್ಪಾಯ್ಲೇಜ್ ಡಿಟೆಕ್ಷನ್, ಫಾರ್ಮ್ ಆಂಡ್ ಫೀಲ್ಡ್ ಪೆÇ್ರಟಕ್ಷನ್ ಸಿಸ್ಟಮ್ ಇನ್ನೂ ಹಲವಾರು ಆವಿಷ್ಕಾರಗಳ ಮೂಲಕ ದೊರೆತ ಉತ್ತಮ ಸ್ಪಂದನೆಯಿಂದ ಪೆÇ್ರೀತ್ಸಾಹಗೊಂಡ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವರವರು ಆಸ್ಕಿ ಲ್ಯಾಬ್ ನೊಂದಿಗೆ ಒಡಂಬಡಿಕೆಗೆ ಒಲವು ವ್ಯಕ್ತಪಡಿಸಿದರು.

ಆಸ್ಕಿ ಲ್ಯಾಬ್-ಆಳ್ವಾಸ್ ಒಪ್ಪಂದ:
ವಿದ್ಯಾರ್ಥಿಗಳಿಂದ ಕಾಪೆರ್ರೇಟ್ ಸಂಸ್ಥೆಗಳು ನಿರೀಕ್ಷಿಸುವ ಶಿಕ್ಷಣವನ್ನು ಒದಗಿಸುವುದು.
ಹೊಸ ಆವಿಷ್ಕಾರಗಳ ಮೂಲಕ ಸಮಾಜದ ಅಭಿವೃದ್ದಿಗೆ ಕೊಡುಗೆ ನೀಡುವುದು. ರಜಾ ಅವಧಿಯಲ್ಲಿ ಕಾರ್ಯಾಗಾರಗಳನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದು. ವಿದ್ಯಾರ್ಥಿಗಳಿಗೆ ಕಂಪೆನಿ ಆರಂಭಿಸಲು ಮತ್ತು ತಮ್ಮ ಹೊಸ ಆವಿಷ್ಕಾರಗಳಿಗೆ ಪೇಟೆಂಟ್ ಪಡೆಯುವುದಕ್ಕೆ .ಪ್ರೊತ್ಸಾಹ ಇಂಟರ್ನಶಿಪ್ ಮೂಲಕ ತಂತ್ರಜ್ಞಾನದ ಮೂಲ ಮಾದರಿಗಳನ್ನು ನಿರ್ಮಿಸಲು ವಿದ್ಯಾರ್ಥಿಗಳಿಗೆ ನೆರವುಇದಲ್ಲದೇ ವಿದ್ಯಾರ್ಥಿಗಳಿಗೆ ಆರ್ಡಿನೊ ತಂತ್ರಜ್ಞಾನ, ಎಂಬೆಡೆಡ್ ಡೆವಲಪ್ಮೆಂಟ್, ಇಂಡಸ್ಟ್ರಿಯಲ್ ಆಟೋಮೆಷನ್ ಹಾಗೂ ಇನ್ನೂ ವಿವಿಧ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾಗುವುದು ಆಸ್ಕಿ ಲ್ಯಾಬ್‍ನ ಉದ್ದೇಶ.
ಆಳ್ವಾಸ್ ಸಂಸ್ಥೆಯ ಅಧ್ಯಕ್ಷ. ಮೋಹನ್ ಆಳ್ವ ಹಾಗೂ ಆಸ್ಕಿ ಲ್ಯಾಬ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಮಂತ್ ಇವರು ಸಹಿ ಹಾಕಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡಿಸ್, ಈ ಒಡಂಬಡಿಕೆಯ ಮೂಲ ರೂವಾರಿ ಎಲೆಕ್ಟ್ರಾನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪರ್ವೇಜ್ ಷರೀಫ್, ಆಸ್ಕಿ ಲ್ಯಾಬ್‍ನ ಮುಖ್ಯ ತಾಂತ್ರಿಕ ಅಧಿಕಾರಿ ಹಿಮಾಂಶು ಉಪಸ್ಥಿತರಿದ್ದರು.
