ಉಡುಪಿ: ಈಗಾಗಲೇ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ನೀರಿನ ಅಭಾವದಿಂದ ಹಲವಾರು ಜೀವಿಗಳಿಗೆ ಪ್ರಾಣಕ್ಕೆ ಭೀತಿ ಉಂಟಾಗಿದೆ.ನುಖ್ಯವಾಗಿ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಹಪತಪಿಸಿ ಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಮಲೆನಾಡಿನಲ್ಲಿ ಈ ರೀತಿಯಲ್ಲಿ ಆದರೆ ಬಯಲು ಸೀಮೆಯಲ್ಲಿ ದೇವರಿಗೆ ಪ್ರೀತಿ.
ನಾವು ನೀರನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು ಮುಖ್ಯವಾಗಿ ಮಳೆ ಬಂದಾಗ ಆ ನೀರನ್ನು ಹಿಡಿದಿಟ್ಟುಕೊಂಡು ಮಳೆ ನೀರ ಕೊಯ್ಲು ಕಾರ್ಯಕ್ರಮ ನಡೆಸಬೇಕು ಪ್ರತಿಯೊಂದು ಮನೆಯಲ್ಲಿ ಈ ರೀತಿಯಲ್ಲಿ ಮಡಿದರೆ ನೀರಿನ ಸಮಸ್ಯೆಯನ್ನು ತಪ್ಪಿಸಬಹುದಾಗಿದೆ.ಅರಣ್ಯ ಪ್ರದೇಶದಲ್ಲಿ ಬದುಗಳನ್ನು ಕಟ್ಟಿ ಅಲ್ಲದೆ ಗಿಡಗಳ ಬಳಿ ತೋಡು ಮಾದರಿಯಲ್ಲಿ ನೀರನ್ನ ಸಂಗ್ರಹಿಸಬಹುದು ಇದರಿಂದ ಆ ಗಿಡಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಲಭಿಸುತ್ತದೆ ಮತ್ತು ಇದರಿಂದ ಮಣ್ಣು ಕೊಚ್ಚಿಕೊಂಡು ಹೋಗುವುದು ತಪ್ಪುತ್ತದೆ.
ಮನೆಯಲ್ಲಿ ಪಾತ್ರ ತೊಳೆದ ಅಥವಾ ಬಟ್ಟೆ ಬರೆ ತೊಳೆದ ನೀರನ್ನು ಬಿಸಾಡದೆ ಅದನ್ನು ಮರಗಳಿಗೆ ಹಾಕಬೇಕು.ಸ್ನಾನದ ನೀರನ್ನು ಬಳಸಿ ತರಕಾರಿ ಬೆಳೆಸಬಹುದಾಗಿದೆ.ಈ ನೀರಿನ ತೊಂದರೆಯಿಂದ ಹಕ್ಕಿಗಳಿಗೆ ನೀರಿಡುವ ಕಾರ್ಯಕ್ರಮ ಪ್ತತಿಯಂದು ಮನೆಯಲ್ಲಿ ನಡೆಯಬೇಕು ಮುಖ್ಯವಾಗಿ ಹಕ್ಕಿಗಳಿಗೆ ನೀರು ಮತ್ತು ಆಹಾರವನ್ನು ನೀಡುದರಿಂದ ಅವುಗಳ ಸಂತತಿಯನ್ನು ಉಳಿಸಬಹುದು.ಈಗಾಗಲೇ ಹಲವಾರು ಕಡೆಗಳಲ್ಲಿ ಜೇಸಿ ಮತ್ತು ಸಾಸ್ತಾನ ಮಿತ್ರರು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ.ಶಾಲಾ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮ ನಡೆಸಿ ಅವರಿಗೂ ಕೂಡ ಹಕ್ಕಿಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.ಈಗಾಗಲೇ ಸುಮಾರು 4500 ಮರಗಳಿಗೆ ಪ್ಸಾಸಿಕ್ ಬಟಲಿ ಅಥವಾ ತೆಂಗಿನ ಗೆರಟೆಯನ್ನು ಬಳಸಿ ನೀರು ಮತ್ತು ಆಹಾರವನ್ನು ಹಕ್ಕಿಗಳಿಗೆ ನೀಡಲಾಗುತ್ತಿದೆ. ಎಂದು ಜೇಸಿಯ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ತಿಳಿಸಿದ್ದಾರೆ.
