ಬಂಟ್ವಾಳ: ಕ್ರೀಡೆ ಇದ್ದಲ್ಲಿ ಆರೋಗ್ಯ ಇರುತ್ತದೆ. ಕರ್ತವ್ಯದ ಒತ್ತಡದಲ್ಲೂ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಪಡೆಯಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಛಾಯಾಗ್ರಾಹಕರ ಕಾರ್ಯ ಅಭಿನಂದನೀಯ ಎಂದು ಸಂಚಾರಿ ಠಾಣಾ ನಿರೀಕ್ಷಕ ಚಂದ್ರಶೇಖರಯ್ಯ ಹೇಳಿದರು.
ಸೌತ್‍ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಷನ್ ಇದರ ಬಂಟ್ವಾಳ ವಲಯದ ಆಶ್ರಯದಲ್ಲಿ ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯ ಮೈದಾನದಲ್ಲಿ ಎಸ್‍ಕೆಪಿಎ ಸದಸ್ಯರಿಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ ಛಾಯಾಗ್ರಾಹಕರು ಸಮಾಜದ ಕಣ್ಣುಗಳಿದ್ದಂತೆ. ಕ್ರೀಡೆಯಿಂದ ಐಕ್ಯತೆ ಸಾಧ್ಯ ಎಂದರು. ಎಸ್‍ಕೆಪಿಎ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ್ವಾಳ ವಲಯವೂ 150ಕಿಂತಲೂ ಅಧಿಕ ಸದಸ್ಯರನ್ನು ಒಳಗೊಂಡಿದ್ದು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರಾ, ಎಸ್‍ಕೆಪಿಎ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ, ಗೌರವಾಧ್ಯಕ್ಷ ಆನಂದ ಎನ್., ಎಪಿಎಂಸಿ ಸದಸ್ಯ ಪದ್ಮರಾಜ್ ಬಲ್ಲಾಳ್, ಸಿಎ ಪ್ರಕಾಶ್ ನಾಯಕ್, ಅರುಣ್ ಲೂವಿಸ್ ಪಿಂಟೋ, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ, ಕ್ರೀಡಾ ಕಾರ್ಯದರ್ಶಿ ಜಯಂತ್‍ಗೌಡ, ನಾಗೇಶ್ ಕೋಟ, ಪ್ರವೀಣ್ ಕೊರೆಯ, ಹಾಜರಿದ್ದರು.
ಗೌರವ ಅಧ್ಯಕ್ಷ ಆನಂದ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಕುಂದರ್ ವಂದಿಸಿದರು, ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
