ಉಡುಪಿ:ನಮ್ಮ ದೇಶದಲ್ಲಿ ಯುವ ಜನಾಂಗ ದೊಡ್ಡ ಸಂಪತ್ತಾಗಿದೆ ಇದರ ಸರಿಯಾದ ಬಳಕೆ ಯಾಗಬೇಕು ಈ ನಿಟ್ಟಿನಲ್ಲಿ ಯುವಕರಿಗೆ ಮಾಹಿತಿ ಮಾರ್ಗದರ್ಶನ ಮಾಡಬೇಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.

BeautyPlus_20170316223655_save
ಅವರು ಅರ್.ಎಸ್.ಬಿ ಸಂಘ ಇದರ ಮಹಿಳಾ ವೇದಿಕೆಯ ವತಿಯಿಂದ ಅರ್.ಎಸ್.ಬಿ ಸಭಾ ಭವನ ಮಣಿಪಾಲದಲ್ಲಿ ಇತ್ತಿಚೆಗೆ ನಡೆದ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಿರದೆ ಮಕ್ಕಳನೇ ಆಸ್ತಿಯನ್ನಾಗಿ ಮಾಡಬೇಕು ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅದ್ಯಕ್ಷೆ ರತ್ನಾವತಿ ನಾಯಕ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರವೀಣ್ ಪ್ರಭು,ವೇದಿಕೆಯ ಪ್ರಮುಖರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *