ಕಾಪೆರ್ರೇಟ್ ಸಾಮಾಜಿಕ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣ: ಏಷ್ಯನ್ ಪೇಂಟ್ಸ್ ನಿವೃತ್ತ ಸಿಇಒ ಜಗದೀಶ ಆಚಾರ್ಯ
ಮೂಡುಬಿದಿರೆ: ಸಾಮಾಜಿಕ ಜವಾಬ್ದಾರಿಯು ಪ್ರತಿಯೊಂದು ಕಂಪೆನಿಯ ಅವಿಭಾಜ್ಯ ಅಂಗ . ಸಮಾಜದ, ಆರ್ಥಿಕತೆಯ ಹಾಗೂ ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಎಲ್ಲಾ ಕಂಪೆನಿಗಳು ತೋರಲೇಬೇಕು ಎಂದು ಏಷ್ಯನ್ ಪೇಂಟ್ಸ್ ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಆಚಾರ್ಯ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂಪೆನಿ ಕಾಯ್ದೆಯ ಮೂಲ ತತ್ವಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

mbd_march20_2
ಈ ಕಾರ್ಯಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಿ, ನೈತಿಕ ಜವಾಬ್ದಾರಿಯಾಗಿ ತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕು . ಕೇವಲ ಲಾಭವನ್ನೇ ಉದ್ದೇಶವಾಗಿಟ್ಟುಕೊಳ್ಳದೆ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಉದ್ಯಮಗಳು ಮಾಡಬೇಕು. ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಸಾಮಾಜಿಕ ಉತ್ತರದಾಯಿತ್ವದ ಕುರಿತು ವಿಶೇಷ ಅಧ್ಯಯನ ನಡೆಸಬೇಕೆಂದು ಕರೆ ಕೊಟ್ಟರು
ಎಂಬಿಎ ವಿಭಾಗದ ಡೀನ್ ಪೆ .ರಾಮಕೃಷ್ಣ ಚಡಗ ಪ್ರಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕರಾದ ಡಾ. ನಾಗೇಂದ್ರ , ಪೆÇ್ರ.ಗುರುದತ್ ಸೋಮಯಾಜಿ ಉಪಸ್ಥಿತರಿದ್ದರು.
ಯಶಸ್ವಿನಿ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *