ಫರಂಗಿಪೇಟೆ: ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದಲ್ಲಿ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾಣದ ಜಾತ್ರೆಯು ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ಇವರ ನೇತೃತ್ವದಲ್ಲಿ ಪೆ.26 ಭಾನುವಾರದಿಂದ ಮಾ.4 ಶನಿವಾರದವರೆಗೆ ನಡೆಯಲಿರುವುದು.

ಮಾ.2 ಗುರುವಾರ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಯವರ ಮಾರ್ಗದರ್ಶನದಲ್ಲಿ ನೂತನ ಧ್ವಜ ಪ್ರತಿಷ್ಟೆ, ಬ್ರಹ್ಮಕಲಶಾಭಿಷೇಕ ಮಾಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಮಾ.3 ಶುಕ್ರವಾರ ಮಡಸ್ನಾನ ಸೇವೆ, ಅರ್ಕುಳ ಬಸದಿಯಲ್ಲಿ ಪ್ರತಿಷ್ಠಾಚಾರ್ಯ ಸಿದ್ಧಕಟ್ಟೆ ಚಂದ್ರನಾಥ ಇಂದ್ರರ ಮಾರ್ಗದರ್ಶನದಲ್ಲಿ ಕ್ಷೀರಾಭಿಷೇಕ ಹಾಗೂ ಪದ್ಮಾವತಿ ದೇವಿ ಪ್ರತಿಷ್ಠೆ, ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ಕಂಚಿಲು ಸೇವೆ ಅನ್ನಸಂತರ್ಪಣೆ ನಡೆಯಲಿದೆ.

ಮಾ.4 ಶನಿವಾರ ಸಾಮೂಹಿಕ ಚಂಡಿಕಾಯಾಗ, ಪಂಚಾಮೃತ ಪೂಜೆ, ನಂದಿಪೂಜೆ, ಪಲ್ಲಪೂಜೆ, ಕ್ಷೀರಾಭಿಷೇಕ, ಮಹಾಮಾತೆ ಪದ್ಮಾವತೀ ದೇವಿಗೆ ಪುಷ್ಪಾಲಂಕಾರ ಪೂಜೆ, ಅನ್ನಸಂತರ್ಪಣೆ,

ಶ್ರೀ ಉಳ್ಳಾಕ್ಲು ಧರ್ಮದೇವತೆಗಳ ನೇಮ, ಬಂಡಿ ಉತ್ಸವ, ಶ್ರೀ ಮಗೃಂತಾಯಿ ಧರ್ಮದೇವತೆಯ ನೇಮ, ಬಂಡಿ ಉತ್ಸವ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.
