ಫರಂಗಿಪೇಟೆ:ಸಂಘ ಸಂಸ್ಥೆ ಗಳು ಧನಾತ್ಮಕ ಚಿಂತನೆಗಳನ್ನು ಹೊಂದಿರಬೇಕು , ನಡೆ ನುಡಿ ಗಳು ಪಾರದರ್ಶಕ ವಾಗಿರಬೇಕು ಈಗಿದ್ದಲ್ಲಿ ಉನ್ನತಿ ಹೊಂದಲು ಸಾಧ್ಯ ಎಂದು ಡಾ ದಿವ್ಯ ವಸಂತ ಶೆಟ್ಟಿ ಪ್ರಾದ್ಯಾಪಕರು ಸಂತ ಅಲೋಸಿಯಸ್ ಕಾಲೇಜು ಮಂಗಳೂರು ಇವರು ಬಂಟರ ಸಂಘ ಫರಂಗಿಪೇಟೆ ವಲಯ ಇದರ ೭ ನೇ ವರ್ಷದ ವಾರ್ಷಿಕ ಮಹಾಸಭೆ ಯಲ್ಲಿ ಮುಖ್ಯ ಆತಿಥಿ ಗಳಾಗಿ ಮಾತನಾಡಿದರು
ಸೈನ್ಯ ದಲ್ಲಿ ಸೇವೆ ಸಲ್ಲಿಸಿದ ಫರಂಗಿಪೇಟೆ ವಲಯ ಬಂಟ ಸಮಾಜದ ಇಬ್ಬರು ನಿವೃತ್ತ ಸೈನಿಕರಾದ ಮನೋಹರ ಶೆಟ್ಟಿ ಕಲ್ಲತಡಮೆ ಮತ್ತು ಕ್ಯಾಪನ್ ಬೃಜೇಶ್ ಚೌಟ ಇವರ ಅನುಪಸ್ಥಿತಿಯಲ್ಲಿ ಅವರ ಹೆತ್ತವರನ್ನು ಸನ್ಮಾನಿಸಲಾಯಿತು
ಬಂಟವಾಳ ದ ಬಂಟರ ಭವನ ದಲ್ಲಿ ನಡೆದ ಈ ವಾರ್ಷಿಕ ಮಾಹಾಸಭೆ ಯಾ ಅಧ್ಯಕ್ಷತೆ ಯನ್ನು ಉದಯ ಕುಮಾರ್ ರೈ ವಳವೂರು ಗುತ್ತು ನಿವೃತ್ತ ಅಧಿಕಾರಿ ವಿಜಯ ಬ್ಯಾಂಕ್ ಇವರು ವಹಿಸಿಕೊಂಡಿದ್ದರು ವೇದಿಕೆ ಯಲ್ಲಿ ಗೌರವ ಅಧ್ಯಕ್ಷರಾದ ಜಯರಾಮ ಸಾಮಾನಿ ತುಂಬೆ , ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುಂಚಮೆ , ಮಹಿಳಾ ವಿಭಾಗ ಡಾ ಅಧ್ಯಕ್ಷರಾದ ಸರಿತಾ ಪ್ರಕಾಶ್ ಬಿ ಶೆಟ್ಟಿ ತುಂಬೆ , ಹರಿಣಾಕ್ಷಿ ಆರ್ ಶೆಟ್ಟಿ ಕೊಳಂಬೆ , ಹರಿಶ್ಚಂದ್ರ ಅಳ್ವ ಪದೆಂಜಾರು , ರಾಜಾರಾಮ್ ಶೆಟ್ಟಿ ಪೆರ್ಲ ಬೈಲು , ವಿಠ್ಠಲ್ ಶೆಟ್ಟಿ ನೀರೊಲ್ಬ್ ಮತ್ತಿತರರು ಉಪಸ್ಥಿತರಿದ್ದರು , ಸದಾನಂದ ಆಳ್ವ ಅರ್ಕುಳ ಕಂಪ ಸ್ವಾಗತಿಸಿದರು , ದೇವದಾಸ್ ಶೆಟ್ಟಿ ಕೊಡ್ಮಣ್, ಭುವನೇಶ್ವರಿ ಬಿ ಶೆಟ್ಟಿ, ನಾಗರತ್ನ ರೈ ಕಾರ್ಯಕ್ರಮ ನಿರೂಪಿಸಿದರು
Attachments area

