ಮೂಡುಬಿದಿರೆ: ಜೇಸಿಐ ಮೂಡುಬಿದಿರೆ ತ್ರಿಭುವನ್ ಹಾಗೂ ಜಮೀಯ್ಯತ್ತುಲ್ ಫಲ್ಹಾಃ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತರಬೇತಿ ಮತ್ತು ಅಧ್ಯಯನ ತಂತ್ರ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಶನಿವಾರ ಸಮಾಜಮಂದಿರದಲ್ಲಿ ನಡೆಯಿತು.
ಜಮೀಯ್ಯತ್ತುಲ್ ಫಲ್ಹಾಃ ಅಧ್ಯಕ್ಷ ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಮಾಡಿದರು. 
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ ಅವಿಭಜಿತ ದ.ಕ ಜಿಲ್ಲೆಯ ಜಮೀಯ್ಯತ್ತುಲ್ ಫಲ್ಹಾಃ ಅಧ್ಯಕ್ಷ ಶಾಹುಲ್ ಹಮೀದ್, ಕಾರ್ಯದರ್ಶಿ ಝುಬೇರ್ ಶಾ, ಕೋಶಾಧಿಕಾರಿ ಝಮೀರ್ ಅಂಬರ್, ಜೇಸಿಐ ತರಬೇತಿ ವಿಭಾಗದ ವಲಯ ನಿರ್ದೇಶಕ ಮಂದಾರ್ ವಿ.ಕಾಳೆ, ಜೇಸಿಐ ರಾಷ್ಟ್ರೀಯ ತರಬೇತುದಾರ ಧಿರೇಂದ್ರ ಜೈನ್ ಮುಖ್ಯ ಅತಿಥಿಗಳಾಗಿದ್ದರು.
ಮೂಡುಬಿದಿರೆ ವಲಯದ 40 ಶಾಲೆಗಳಲ್ಲಿ ತರಬೇತಿ ನೀಡಿದ 14 ಮಂದಿ ಜೇಸಿಐ ತರಬೇತುದಾರರು ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಜಮೀಯ್ಯತ್ತುಲ್ ಫಲ್ಹಾಃ ಪದಾಧಿಕಾರಿಗಳನ್ನು, ತರಬೇತಿಗೆ ಸಹಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಗೌರವಿಸಲಾಯಿತು.
ಜಮೀಯ್ಯತ್ತುಲ್ ಫಲ್ಹಾಃ ಕಾರ್ಯದರ್ಶಿ ಸಲೀಂ ಹಂಡೇಲು, ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ನಿತೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
