ಮಂಗಳೂರು:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಹತ್ತನೇ ವರ್ಷಚಾರಣೆಯನ್ನು ಫೆ.17ರಂದು ರಾಜ್ಯದ ಮೈಸೂರು, ಉಪ್ಪಿನಂಗಡಿ ಮತ್ತು ಉಳ್ಳಾಲದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಈ ಮಧ್ಯೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಉಳ್ಳಾಲದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಸಲು ತೀರ್ಮಾನಿಸಿರುತ್ತೇವೆ. ಆದುದರಿಂದ ಸಂಘಟನೆಯ ಸದಸ್ಯರು, ಬೆಂಬಲಿಗರು ಹಾಗು ಹಿತೈಷಿಗಳೆಲ್ಲರೂ ಪೇ.17 ಅಪರಾಹ್ನ 2:30 ಕ್ಕೆ ಸರಿಯಾಗಿ ಮಂಗಳೂರು ನೆಹರೂ ಮೈದಾನದಲ್ಲಿ ನಡೆಯಲಿರುವ ಯುನಿಟ್ ಮಾರ್ಚ್ ಮತ್ತು ಸಾರ್ವಜನಿಕ ಸಮಾವೇಶಕ್ಕೆ ಆಗಮಿಸಲು ಈ ಮೂಲಕ ಆಹ್ವಾನಿಸುತ್ತಿದ್ದೇವೆ.
