ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಹಳೆ ವಿದ್ಯಾರ್ಥಿ ಸಂಘ, ಶ್ರೀ ಮಹಾವೀರ ಕಾಲೇಜು ತುಳುಕೂಟ ಇವುಗಳ ಸಹಯೋಗದಲ್ಲಿ ಮಂಗಳೂರು ವಿವಿ ಮಟ್ಟದ ಸಾಂಸ್ಕøತಿಕ ವೈಭವ ಸ್ಪರ್ಧೆ ತುಳುನಾಡ ಸಿರಿ ಮದಿಪು-2017 ಶ್ರೀ ಮಹಾವೀರ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಎಮ್. ಜಾನಕಿ ಬ್ರಹ್ಮಾವರ ಸಾಂಸ್ಕøತಿಕ ವೈಭವವನ್ನು ಉದ್ಘಾಟಿಸಿ ಮಾತನಾಡಿ ತುಳು ಭಾಷೆಯ ಉಳಿವಿಗಾಗಿ ಅಕಾಡೆಮಿಯು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ತುಳುನಾಡಿನ ಸಂಸ್ಕøತಿಯನ್ನು ಬಿಂಬಿಸುವ ಮತ್ತು ಸೇವೆಯನ್ನು ಮಾಡಿರುವ ವೀರ ವಣಿತೆಯರ ಮತ್ತು ಪುರುಷರ ಬಗ್ಗೆ ಪ್ರಹಸನ, ರೂಪಕಗಳನ್ನು ಮಾಡಬೇಕೆಂದು ಹೇಳಿದರು. ಮೂಡುಬಿದಿರೆ ಶಾಸಕ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತುಳು, ಕೊಂಕಣಿ ಹಾಗೂ ಬ್ಯಾರಿ ಹೀಗೆ ಮೂರು ಅಕಾಡೆಮಿಗಳನ್ನು ಹೊಂದಿರುವ ಜಿಲ್ಲೆ ದ.ಕ ಜಿಲ್ಲೆಯಾಗಿದೆ. ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತುಳುನಾಡಿನ ಸಂಸ್ಕøತಿಯನ್ನು ಉಳಿಸಲು ಪ್ರಯತ್ನಪಟ್ಟಿದ್ದಾರೆ. ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡುವ ಮೂಲಕ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತ್ತಾಗಬೇಕೆಂದು ಹೇಳಿದರು. Untitled-1 copy
ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿವಿ ಮಟ್ಟದಲ್ಲಿ ತುಳು ಪಠ್ಯ ಪುಸ್ತಕವನ್ನು ಅಳವಡಿಸಲು ಪ್ರಯತ್ನಿಸಲಾಗುತ್ತಿದೆ. ಆರಂಭದಲ್ಲಿ 1_10ರ ವರೆಗಿನ ಶಾಲೆಗಳಲ್ಲಿ 18 ಜನ ವಿದ್ಯಾರ್ಥಿಗಳಿದ್ದರು ಇದೀಗ ಸಾವಿರಕ್ಕೆ ಹತ್ತಿರವಾಗಿದೆ. ವಿವಿ ಮಟ್ಟದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ತುಳುವನ್ನು ಐಚ್ಛಿಕ ಭಾಷೆಯಾಗಿ ಕಲಿಯಲು ಪಠ್ಯ ಪುಸ್ತಕ ಅನುಮೋದನೆಯಾಗಿದೆ. ವಿದ್ವಾಂಸರು, ಕಲಾವಿದರ ಸೇರಿ ಒಟ್ಟು 15 ಮಂದಿಯ ತಲಾ 30 ನಿಮಿಷಗಳ ಸಾಕ್ಷ್ಯಚಿತ್ರಗಳು ರಚನೆಯಾಗಿವೆ ಎಂದು ತಿಳಿಸಿದರು.
ನಾಟಿವೈದ್ಯೆ ಕೋಟೆಬಾಗಿಲಿನ ಲಲಿತಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಹಾವೀರ ಪ.ಪೂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ರಮೇಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಸಂಗದ ನಾಯಕ ಅಲಿಸ್ಟರ್ ಜೊಸ್ವಿನ್ ಲೋಬೋ, ವಿದ್ಯಾರ್ಥಿ ಸಂಯೋಜಕರಾದ ಗ್ಲಾಡ್ಸನ್ ಕಾರ್ಡೋಜಾ, ನಾಗೇಶ್ ಪ್ರಭು, ಜಿತೇಂದ್ರ, ವೆನೆಸ್ಸಾ ಮೊರಾಸ್, ಕಾರ್ಯಕ್ರಮ ಸಂಯೋಜಕರಾದ ವಿಜಯಲಕ್ಷ್ಮೀ ಮಾರ್ಲ, ಸುಲೋಚನಾ ಪಚ್ಚಿನಡ್ಕ, ಪ್ರಶಾಂತ್ ಜೆ., ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಶ್ರೀ ಮಹಾವೀರ ಕಾಲೇಜಿನ ಪ್ರಾಚಾರ್ಯ ಪ್ರೊ. ಹೆಚ್. ಚಂದ್ರಶೇಖರ ದೀಕ್ಷಿತ್ ಮೊದಲ ಮಾತುಗಳನ್ನಾಡಿದರು. ನಳಿನಿ ಸನ್ಮಾನಪತ್ರ ವಾಚಿಸಿದರು. ವಿದ್ಯಾರ್ಥಿನಿ ರಂಜಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್ ವಂದಿಸಿದರು.

By Suddi9

Leave a Reply

Your email address will not be published. Required fields are marked *