ಮೂಡುಬಿದಿರೆ: ಲವಲವಿಕೆಯಿಂದ ಕುಣಿದಾಡುತ್ತಿದ್ದ ಮಗುವೊಂದು ಕಂಜೆನೆಟಲ್ ಇಥಿಯೋಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಪ್ರಕರಣ ದರೆಗುಡ್ಡೆ ಗ್ರಾಮ ಪಂಚಾಯಿತಿ ಪಣಪಿಲ ಗ್ರಾಮದ ಪುನಿಕೆಬೆಟ್ಟು ಎಂಬಲ್ಲಿ ಕಂಡುಬಂದಿದೆ.ಪುನಿಕೆಬೆಟ್ಟು ಎಂಬಲ್ಲಿ ವಾಸಿಸುತ್ತಿರುವ ಹೋಟೆಲ್ ಕಾರ್ಮಿಕ ಜಗನ್ನಾಥ್ ಕುಮಾರ್ ಹಾಗೂ ಬೀಡಿ ಕಾರ್ಮಿಕೆ ಸಂಧ್ಯಾ ಪೂಜಾರಿ ದಂಪತಿಯ ಏಕ ಮಾತ್ರ ಪುತ್ರಿ ಒಂದೂವರೆ ವರ್ಷದ ಲಾವಣ್ಯ ಅನಾರೋಗ್ಯ ಪೀಡಿತ ಬಾಲಕಿ. 2014ರಲ್ಲಿ ವೈವಾಹಿಕ ಬದುಕಿಗೆ ನಡೆಯಿಟ್ಟ ಜಗನ್ನಾಥ್-ಸಂಧ್ಯಾ ದಂಪತಿಗೆ ಹುಟ್ಟಿದ ಮೊದಲ ಮಗುವೇ ಚರ್ಮದ ಕಾಯಿಲೆಗೊಳಗಾಗಿರುವುದು ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ.ಕಾಯಿಲೆ ಪ್ರಾರಂಭದಿಂದಲೇ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ. ಸುಮಾರು ಐದು ವರ್ಷಗಳ ಕಾಲ ಚಿಕಿತ್ಸೆ ಮುಂದುವರಿಸುವಂತೆ ವೈದಾಧಿಕಾರಿಯವರು ತಿಳಿಸಿದಿರುವುದರಿಂದ ಮಗುವಿನ ಹೆತ್ತವರು ಮಾಹಿತಿ ನೀಡಿದ್ದಾರೆ.ವೈದ್ಯರ ಚಿಕಿತ್ಸೆಯಿಂದಾಗಿ ಮಗು ಗುಣಮುಖವಾಗುತ್ತಿದ್ದರೂ ಮಳೆಗಾಲ- ಬೇಸಿಗೆ ಕಾಲದ ಹವಾಮಾನ ವೈಪರೀತ್ಯಗಳಿಂದಾಗಿ ಆರೋಗ್ಯದಲ್ಲಿ ಏರಿಳಿತವಾಗುತ್ತಿರುವುದಾಗಿ ಮನೆಯವರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಚಿಕಿತ್ಸೆ ಉಚಿತವಾಗಿ ನಡೆಯುತ್ತಿದ್ದರೂ ಹೆಚ್ಚಿನ ಮೌಲ್ಯದ ಮದ್ದುಗಳನ್ನು ಮಗುವಿಗೆ ನೀಡಬೇಕಾಗಿರುವುದರಿಂದ ಹಣದ ಅವಶ್ಯಕತೆಯಿದೆ. ಹೆಚ್ಚಿನ ಆದಾಯ ತರಸದ ಉದ್ಯೋಗ ಇಲ್ಲದಿರುವುದರಿಂದ ಮನೆಯವರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ.

mbd_feb10_6 (1)

mbd_feb10_6 (2)

ಮಗುವಿನ ಚಿಕಿತ್ಸೆಗಾಗಿ ಪ್ರತ್ಯೆಕಾ ವಾಹನದಲ್ಲಿ ಕರೆದೊಯ್ಯಬೇಕಾಗುತ್ತದೆ. ತಿಂಗಳಲ್ಲಿ ಎರಡು ಬಾರಿಯಾದರೂ ಆಸ್ಪತ್ರೆಗೆ ಹೋಗಬೇಕಾಗಿರುವುದರಿಂದ ಖರ್ಚು ವೆಚ್ಚಗಳು ಹೆಚ್ಚುತ್ತದೆ.
ಸಂಧ್ಯಾ ಪೂಜಾರಿಯವರು ಬೆಳುವಾಯಿ ಪರಿಸರದವರಾಗುವುದರಿಂದ ಆ ಪರಿಸರದ ಮಂಜನಕಟ್ಟೆಯ ನಮ್ಮ ಜವನೆರ್ ತಂಡದ ಯುವಕರು ಮಗುವಿನ ಹೆಸರಿನಲ್ಲಿ ಹಗ್ಗ ಜಗ್ಗಾಟ ಪಂದ್ಯಾಟ ನಡೆಸಿ ಸುಮಾರು ಎಪ್ಪತ್ತು ಸಾವಿರದಷ್ಟು ಹಣವೊದಗಿಸಿದ್ದಾರೆ.
ಬೆಳುವಾಯಿ ಸಿಎ ಬ್ಯಾಂಕ್ ಆಡಳಿತ ಮಂಡಳಿ, ಶಾಸಕ ಅಭಯಚಂದ್ರ ಜೈನ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಲಾಡಿ ಹರ್ಷವರ್ಮ ಹೆಗ್ಡೆ, ಅಂಬೂರಿ ನಾಗರಾಜ ಶೆಟ್ಟಿ, ಕಾಪುವಿನ ವೀರಾಂಜನೆಯ ಪೊಲಿಪು ತಂಡದವರು ನಮ್ಮ ಜವನೆರ್ ತಂಡದೊಂದಿಗೆ ಆರ್ಥಿಕ ನೆರವು ನೀಡುವಲ್ಲಿ ಸಹಕರಿಸಿದ್ದಾರೆ.
ಹಗ್ಗ ಜಗ್ಗಾಟದಲ್ಲಿ ಅಗ್ರ ಸ್ಥಾನಿಯಾಗಿ ಮೂಡಿಬಂದ ಬೆಳುವಾಯಿಯ ಬಿಜೆಪಿ ಯುವ ಘಟಕ ಪ್ರಾಯೋಜಿತ ಜೋಕುಳ ಕಂಬಳ ಪಟ್ಟೆ ತಂಡದ ಸದಸ್ಯರು ಕೂಡ ಬಹುಮಾನ ರೂಪದಲ್ಲಿ ಬಂದ ಹಣವನ್ನು ಮಗುವಿನ ಚಿಕಿತ್ಸೆಗೆ ನೀಡಿ ಮಾನ್ಯತೆ ನೆರವು ನೀಡಿದ್ದಾರೆ. ಶಾಸಕ ಅಭಯಚಂದ್ರರವರು ಮುಖ್ಯಮಂತ್ರಿ ಪರಿಹಾರ ನಿಧಿ ಒದಗಿಸುವ ಭರವಸೆಯಿತ್ತಿದ್ದಾರೆ. ಮಿಥುನ್ ರೈಯವರು ಮಗುವನ್ನು ಕೆಎಂಸಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆಗೊಳಪಡಿಸುವಲ್ಲಿ ಸಹಕರಿಸಿದ್ದಾರೆ. ಮಗುವಿನ ಮನೆಯ ಪ್ರತೀ ತಿಂಗಳ ಖರ್ಚು ಭರಿಸುವುದಾಗಿ ನಮ್ಮ ಜವನೆರ್ ಸಂಘಟನೆಯವರು ಆಶ್ವಾಸನೆ ನೀಡಿದ್ದಾರೆ. ಈ ಎಲ್ಲಾ ಸಹಕಾರಗಳ ನಡುವೆಯೂ ತೀರಾ ಬಡತನ, ಮೂಲಭೂತ ಸೌಕರ್ಯವಿಲ್ಲದ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿರುವ ದಂಪತಿ ಆರ್ಥಿಕ ಕಗ್ಗಂಟಿನಿಂದ ಜೀವನ ನಿರ್ವಹಿಸುತ್ತಿದ್ದಾರೆ.

ಮಗುವಿನ ಆರೋಗ್ಯವನ್ನು ಜೋಪಾನದಿಂದ ಕಾಪಾಡಬೇಕಾಗಿರುವುದರಿಂದ ಮತ್ತಷ್ಟು ಆರ್ಥಿಕ ಸಹಾಯಬೇಕಾಗಿದೆ. ಸಹೃದಯ ದಾನಿಗಳು ನೆರವು ಈ ಕುಟುಂಬಕ್ಕೆ ಅನಿವಾರ್ಯವಾಗಿದೆ.
ಬ್ಯಾಂಕ್ ಖಾತೆ ವಿವರ:
ಜಗನ್ನಾಥ ಕುಮಾರ್
ಕಾರ್ಪೊರೇಶನ್ ಬ್ಯಾಂಕ್
ಮೂಡುಮಾರ್ನಾಡು ಶಾಖೆ
ಎಸ್‍ಬಿ ಅಕೌಂಟ್ ನಂ. 160100101001788
ಐಎಪ್‍ಎಸ್‍ಸಿ ಕೋಡ್ ಸಿಓಆರ್‍ಪಿ0001601

By Suddi9

Leave a Reply

Your email address will not be published. Required fields are marked *