ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ವತಿಯಿಂದ 69ನೇ ಗಣರಾಜ್ಯೋತ್ಸವದ ಅಂಗವಾಗಿ ಎಸ್.ಡಿ.ಎಮ್.ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಮಂಗಳೂರು ಇದರ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಾಗೂ ಜ್ಯೂಸ್ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಬ್ಲಡ್ ಹೆಲ್ಪ್‍ಲೈನ್ ಅಡ್ಡೂರು ವಲಯದ ಮುಖ್ಯಸ್ಥ ಡಾ. ಇ.ಕೆ.ಎ. ಸಿದ್ದೀಕ್ ಅಡ್ಡೂರು ಶಾಲಾ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಮೂಲಕ ಮಾದರಿಯಾದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕವು ಕಳೆದ ಐದು ತಿಂಗಳ ಹಿಂದೆ ಪ್ರಾರಂಭವಾದ ವಾಟ್ಸಪ್ ಗ್ರೂಪ್ ಅದೆಷ್ಟೋ ತುರ್ತು ರಕ್ತವನ್ನು ನಿಗದಿತ ಸಮಯದಲ್ಲಿ ಶೇಖರಿಸುವಲ್ಲಿ ಯಶಸ್ವಿಯಾಗಿ 7ನೇ ರಕ್ತದಾನ ಶಿಬಿರದತ್ತ ದಾಪುಗಾಲಿಡುತ್ತಿದೆ. ವಿದ್ಯಾರ್ಥಿಗಳಿಗೆ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಭಾಷಣಗಳು ಮಾಡಲಾಯಿತು..
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸ್ಥಾಪಕ ನಿಸಾರ್ ದಮ್ಮಾಮ್ ಉಳ್ಳಾಲ ಇಕ್ಬಾಲ್ ಕೆನರಾ, ಆರಿಫ್ ಉಳಾಯಿಬೆಟ್ಟು, ಶರೀಫ್ ಇಕ್ರಾ ಉಳಾಯಿಬೆಟ್ಟು, ಅಬ್ದುಲ್ ಕುಂಞ ಉಳಾಯಿಬೆಟ್ಟು ಅಬ್ದುಲ್ ರಹ್ ಮಾನ್ ಉಳಾಯಿಬೆಟ್ಟು ಅಡ್ಡೂರು ವಲಯದ ಎಡ್ಮಿನ್ ಮುಸ್ತಫಾ ದೆಮ್ಮಲೆ ಅಡ್ಡೂರು ಎ.ಕೆ.ರಿಯಾಝ್ ದಿಲ್ಶಾನ್ ಉಳ್ಳಾಲ, ಬಶೀರ್ ಕೃಷ್ಣಾಪುರ, ನವಾಝ್ ಉಳ್ಳಾಲ ಮತ್ತು ಇರ್ಝಾನ್ ಅಡ್ಡೂರು , ಮೆಹತಾಬ್ ಎಮ್.ಕೆ.ಕೈಕಂಬ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
