ಕೈಕಂಬ: “ಶ್ರೀ ರಾಮ ಸೇವಾಂಜಲಿ” ಕಲಾ ಸೇವಾ ಸಂಸ್ಥೆಯ 7ನೇ ವಾರ್ಷಿಕೋತ್ಸವವು ಫೆ.11 ಶನಿವಾರದಂದು ಜರುಗಲಿದೆ.

rama

ಸಂಜೆ 5.30ರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಗಾನಕೋಗಿಲೆ ಸತ್ಯನಾರಾಯಣ ಪುಣಿಚಿತ್ತಾಯ, ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳಿಂಜಡ್ಕ, ಪೂರ್ಣೇಶ್ ಆಚಾರ್ಯ ಮುಂತಾದ ಯಕ್ಷಗಾನ ಕಲಾವಿದರಿಂದ ಹಾಗೂ ಕಿನ್ನಿಕಂಬಳ ವಾದಿರಾಜ ಕಲ್ಲೂರಾಯ ಇವರ ಸಂಯೋಜನೆಯಲ್ಲಿ “ಯಕ್ಷ-ಗಾನ-ವೈಭವ” ಹಾಗೂ ರಾತ್ರಿ 7ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮಗಳು ಹಾಗೂ ರಾತ್ರಿ 8.30ರಿಂದ ಸ್ಕೂಲ್ ಆಫ್ ಡ್ಯಾನ್ಸ್ ಇವರ ತಂಡದಿಂದ “ಸೀ ಗೈಸ್ ಡ್ಯಾನ್ಸ್ ಪ್ಲೋರ್”, ತೊಕ್ಕೋಟು ಇವರುಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜರುಗಲಿದೆ.

ರಾತ್ರಿ 8ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದಾವರ ಬಾಳಿಕೆಯ ವಿನೋದ್ ಮಾಡ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ವಾಣಿ ವಿಲಾಸ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಕಂದಾವರ ನೀಲಕಂಠ ದೇವಳದ ಅರ್ಚಕ ಲಕ್ಷ್ಮೀನಾರಾಯಣ ಉಡುಪ, ಕೈಕಂಬ ವಿನಾಯಕ ಮೆಡಿಕಲ್ಸ್‍ನ ಮಾಲಕ ರಾಜೇಂದ್ರ ಹೆಗ್ಡೆ, ಕೈಕಂಬ ಎಂಟರ್‍ಪ್ರೈಸಸ್ ಆದ್ಯಪಾಡಿ ಮಾಲಕ ರೂಪೇಶ್ ಶೆಟ್ಟಿ, ಕಂದಾವರ ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಕೆ.ಹರೀಶ್ ಕೈಕಂಬ, ಕೈಕಂಬ ಹರ್ಷಿತಾ ಹೋಟೇಲಿನ ಮಾಲಕ ಸಂತೋಷ್ ಶೆಟ್ಟಿ, ಕಿನ್ನಿಕಂಬಳ ಸಿವಿಲ್ ಕಾಂಟ್ರಾಕ್ಟರ್ ನಾಗೇಶ್ ಜೋಗಿ, ಪ್ರೊ. ಲತಿಕಾ ಲೋಕೇಶ್ ಶೆಟ್ಟಿ ಮೂಡಬಿದಿರೆ, ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *