ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಶ್ರೀ ಉಗ್ಗೆದಲ್ತಾಯ ದೈವ ಮತ್ತು ಪಂಜುರ್ಲಿ ದೈವದ ಇದರ ನೂತನ ದೊಂಪದ ಬಲಿ ಕ್ಷೇತ್ರದ ಶುದ್ಧೀಕರಣ ಹಾಗೂ ಕಲಶೋತ್ಸವ ಪೂಜೆ ಮತ್ತು ದೊಂಪದ ಬಲಿ ಉತ್ಸವ ಫೆ.10ರಿಂದ ಫೆ.12ರವರೆಗೆ ಜರುಗಲಿದೆ.

14

ಪೆ.2ರಂದು ಬೆಳಿಗ್ಗೆ 9.45ಕ್ಕೆ ಕುಂಟ ಮುಹೂರ್ತ, ಫೆ.10ರಂದು ಸಂಜೆ 5ರಿಂದ ಸಾಮೂಹಿಕ ಪ್ರಾಥನೆ, ಆಲಯ ಪರಿಗ್ರಹ, ಸಪ್ತಸಿದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ವನ ದುರ್ಗಾಪೂಜೆ ನಡೆಯಲಿದೆ.

ಫೆ.11 ರಂದು ಬೆಳಿಗ್ಗೆ 5ಕ್ಕೆ ಕೂರಿಯಾಳ ಗುತ್ತಿನಿಂದ ಶ್ರೀ ಉಗ್ಗೆದಲ್ತಾಯ ದೈವದ ಮತ್ತು ನಡುಬಾಳಿಕೆಯಿಂದ ಪಂಜುರ್ಲಿ ದೈವದ ಭಂಡಾರ ಹೊರಡುವುದು. ಬೆಳಿಗ್ಗೆ 9ರಿಂದ ಪಂಚ ವಿಶಂತಿಕಲಶ, ಪ್ರಧಾನ ಹೋಮ, ಶಾಂತಿ ದುರ್ಗಾ ಹೋಮ, ಗಣಹೋಮ, ಕಲಾಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ ಉಗ್ಗೆದಲ್ತಾಯ ದೈವದ ನೇಮೋತ್ಸವ ನಡೆಯಲಿದೆ.

ಫೆ.12ರಂದು ರಾತ್ರಿ ಉಗ್ಗೆದಲ್ತಾಯ ಮತ್ತು ಪಂಜುರ್ಲಿ ದೈವದ ನೇಮೋತ್ಸವ ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *