ಬಂಟ್ವಾಳ: ಶ್ರೀ ಮಹಾಲಿಂಗೇಶ್ವರ ಗಣಪತಿ ದೇವಸ್ಥಾನ ತುಂಬೆ ಇದರ ಜೀರ್ಣೋದ್ದಾರದ ಅಂಗವಾಗಿ ಪ್ರಥಮ ಶಿಲೆಗಳನ್ನು ದೇವಸ್ಥಾನಕ್ಕೆ ಮೆರವಣಿಗೆಯ ಮೂಲಕ ತರಲಾಯಿತು. ತುಂಬೆಯಲ್ಲಿ ಜೀರ್ಣೋದ್ದಾರದ ಹಂತದಲ್ಲಿರುವ ಈ ದೇವಸ್ಥಾನಕ್ಕೆ ಗೋಪುರ ಮತ್ತು ಗುಡಿಯ ನಿರ್ಮಾಣಕ್ಕೆ ಬೇಕಾದ ಶಿಲೆಗಳನ್ನು ಇಂದು ಸಂಜೆ ತುಂಬೆ ಜಂಕ್ಸನ್‍ನಿಂದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಜಿ.ಪಂ.ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ , ರವೀಂದ್ರ ಕಂಬಳಿ ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.



