ಬಂಟ್ವಾಳ: ತಾಲ್ಲೂಕಿನ ಪುದು ಗ್ರಾಮದ ಸುಜೀರು ಸಾನದಮನೆ ಬಳಿ ವ್ಯಕ್ತಿಯೊಬ್ಬರು ಕಳೆದ ಎರಡು ದಿನಗಳ ಹಿಂದೆ ಸಾರ್ವಜನಿಕ ಕುಡಿಯುವ ನೀರಿನ ತೆರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

suicide--logo

ಮೃತರನ್ನು ಕಾವಳಪಡೂರು ಗ್ರಾಮದ ಕಾಡಬೆಟ್ಟು ನಿವಾಸಿ ಸದಾನಂದ ಶೆಟ್ಟಿ(47) ಎಂದು ಗುರುತಿಸಲಾಗಿದೆ. ಇವರು ಬಿ.ಸಿ.ರೋಡ್‍ನಲ್ಲಿ ನ್ಯೂ ಸಂತೋಷ್ ಎಂಬ ಹೆಸರಿನ ಹೋಟೆಲ್ ನಡೆಸುತ್ತಿದ್ದು, ಕಳೆದ ಬುಧವಾರ ಬೆಳಿಗ್ಗೆ ಸುಜೀರು ಎಂಬಲ್ಲಿರುವ ತಾಯಿ ಮನೆಗೆ ಹೋಗಿ ಬಳಿಕ ನಾಪತ್ತೆಯಾಗಿದ್ದರು ಎನ್ನಲಾಗಿದೆ. ತೀರಾ ಆರ್ಥಿಕ ಅಡಚಣೆ ಇವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಶುಕ್ರವಾರ ಬೆಳಿಗ್ಗೆ ಮೆಸ್ಕಾಂ ಸಿಬ್ಬಂದಿಗಳು ಇಲ್ಲಿನ ವಿದ್ಯುತ್ ತಂತಿ ದುರಸ್ತಿಗೆ ಹೋಗಿದ್ದ ವೇಳೆ ಮೃತರ ಶರೀರ ನೀರಿನಲ್ಲಿ ತೇಲಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *