ಮೂಡುಬಿದಿರೆ: ನಿಡ್ಡೋಡಿ ಗ್ರಾಮದಲ್ಲಿ 4 ಸಾವಿರ ಮೆಗಾ ವ್ಯಾಟ್ ಸಾಮಥ್ರ್ಯ ಉಷ್ಣವಿದುತ್ ಸ್ಥಾವರ ಸ್ಥಾಪಿಸಲು ಉದ್ದೇಶಿಸಿದ ಕೊಲತ್ತರುಪದವಿನಲ್ಲಿ ನಿಗೂಡ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಅಂತಕವನ್ನು ಉಂಟು ಮಾಡಿದೆ.

ಸೋಮವಾರ ಸಂಜೆ ಗ್ರಾಮದ ಜನರು ಸೊಪ್ಪು ತರಲು ಹೋದ ಸಂದರ್ಭದಲ್ಲಿ ಗುರುತುಗಳು ಕಾಣಿಸಿಕೊಂಡಿದ್ದು ಈ ಬಗ್ಗೆ ಅವರು ಮಾತೃಭೂಮಿ ಹೋರಾಟ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದರು. ಈ ಹಿನಲೆಯಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಂಕಮಿಜಾರು, ಬಡಗಮಿಜಾರು, ನಿಡ್ಡೋಡಿ ಗ್ರಾಮದ ಗಡಿಪ್ರದೇಶಗಳ ಹಲವು ಕಡೆಗಳಲ್ಲಿ ಗುರುತುಗಳನ್ನು ಹಾಕಿರುವುದು ಕಂಡುಬಂದಿದೆ. ಕೆಲವು ಕಡೆಗಳಲ್ಲಿ ಮುರಕಲ್ಲುಗಳನ್ನು ರಾಶಿ ಹಾಕಿ ಅದರ ಮೇಲೆ ದಪ್ಪದಲ್ಲಿ ಬಣ್ಣ ಹಾಗೂ ಕೆಲವು ಗುರುತುಗಳನ್ನು ಹಾಕಿದ್ದಾರೆ. ತೀರಾ ಗುಡ್ಡಪ್ರದೇಶದ ನಿರ್ಜನ ಪ್ರದೇಶದಲ್ಲಿ ಈ ಗುರುತುಗಳನ್ನು ಹಾಕಿರುವುದರಿಂದ ಅದನ್ನು ಹಾಕಿದವರು ಯಾರೂ ಹಾಗೂ ಯಾವ ಉದ್ದೇಶಕ್ಕೆ ಹಾಕಿದ್ದಾರೆ ಎಂಬುವುದು ನಿಗೂಡವಾಗಿದೆ. ಬಾಣದ ಗುರುತಿನ ಜತೆಗೆ 971, 974 ಹೀಗೆ ಸಂಖ್ಯೆಗಳನ್ನು ಹಾಕಲಾಗಿದ್ದು ಆತಂಕ ಸೃಷ್ಠಿಸುವಂತಿದೆ. ಈ ಬಗ್ಗೆ ಮಾತೃಭೂಮಿ ಹೋರಾಟ ಸಮಿತಿಯವರು ಸ್ಥಳೀಯ ತಹಸೀಲ್ದಾರ್, ಅರಣ್ಯ ಇಲಾಖೆ, ಸ್ಥಳೀಯ ಪಂಚಾಯಿತಿಗಳಲ್ಲಿ ವಿಚಾರಿಸಿದ್ದು, ಈ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ಉತ್ತರಿಸಿದ್ದಾರೆ.

3n

1 n

2n

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜಾ ಯೋಜನೆಯ ಬಗ್ಗೆ ಜನಪ್ರತಿನಿಧಿಗಳು ವಿಭಿನ್ನ ಹೇಳಿಕೆ ನೀಡುತ್ತಿದ್ದು, ಯೋಜನೆಯ ಬಗ್ಗೆ ಗೊಂದಲ ಸೃಷ್ಠಿಸುತ್ತಿದ್ದಾರೆ. ಯೋಜನೆಯನ್ನು ಅನುಷ್ಠಾನಗೊಳಿಸಲು ಉತ್ಸುಕರಾಗಿರುವ ಅಧಿಕಾರಿಗಳು ತೆರೆಮರೆಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿರುವುದು ಇದರ ಮೂಲಕ ಸಾಬೀತಾಗಿದೆ ಎಂದು ಹೇಳಿದರು

By suddi9

Leave a Reply

Your email address will not be published. Required fields are marked *