ಬಿ.ಸಿ.ರೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಬಂಟ್ವಾಳ ತಾಲೂಕು ಮಟ್ಟದ ಕೃಷಿ ಉತ್ಸವವು ಜ.11 ಮತ್ತು 12ರಂದು ಬಿ.ಸಿ.ರೋಡು ಗಾಣದಪಡ್ಪು ಮೈದಾನದಲ್ಲಿ ನಡೆಯಲಿದ್ದು ಉತ್ಸವದಲ್ಲಿ ಸುಮಾರು 15 ಸಾವಿರಕ್ಕಿಂತಲೂ ಹೆಚ್ಚು ರೈತರು ಭಾಗವಹಿಸಲಿದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವಿರೇಂದ್ರ ಹೆಗ್ಡೆಯವರು ಉದ್ಘಾಟಿಸಲಿದ್ದಾರೆ .ಈಗಾಗಲೇ ಸಿದ್ದತೆ ಕಾರ್ಯ ಭರದಿಂದ ಸಾಗುತ್ತಿದ್ದು ಯೋಜನೆಯ ಗುಂಪುಗಳ ಸದಸ್ಯರು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಗೆ ಸಂಬಂದಪಟ್ಟ ಹಲವಾರು ಮಾರಟ ಮಳಿಗೆಗಳು ಮತ್ತು ಪ್ರದರ್ಶನ ಮಳಿಗೆಗಳು ಪಾಲ್ಗೋಳ್ಳಳಿವೆ. ದೇಶಿ ತಳಿಯ ಕೃಷಿಗೆ ಸಂ¨ಂದಪಟ್ಟ ಉಪಕರಣಗಳು ಮತ್ತು ಜಾನುವಾರುಗಳು ಕೂಡಾ ಭಾಗವಹಿಸುತ್ತವೆ .
ಜ. 11ರಂದು ಬೆಳಿಗ್ಗೆ ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಸ್ಥಾನ ಬಳಿಯಿಂದ ವಿವಿಧ ವಾದ್ಯ ಘೋಷಗಳೊಂದಿಗೆ ಕೃಷಿ ಉತ್ಸವದ ಮೆರವಣಿಗೆಗಳೊಂದಿಗೆ ಪ್ರಾರಂಭಗೊಂಡು ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಉಪಸ್ಥಿತರಿದ್ದು, ಜಿಲ್ಲಾ ಉಸ್ತವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಕರ್ನಾಟಕ ಸರಕಾರದ ಮಾಜಿ ಸಚಿವ ನಾಗರಾಜ ಶೆಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ನ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪಶುಸಂಗೋಪನೆ ಇಲಾಖೆಯ ಉಪನಿದೇರ್ಶಕ ಡಾ| ಟಿ.ತಿಪ್ಪೇಸ್ವಾಮಿ, ಪ್ರಗತಿಪರ ಕೃಷಿಕ ರಾಜೇಶ್ ಉಳಿಪಾಡಿಗುತ್ತು, ಬಂಟ್ವಾಳ ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ತುಂಬೆಯ ಅಬ್ದುಲ್ ಅಝೀಜ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.
ಮಧ್ಯಾಹ್ನ ಕೃಷಿ ವಿಚಾರಗೋಷ್ಠಿಯಲ್ಲಿ ಜೀವಜಲ ಸಂರಕ್ಷಣೆಯ ಬಗ್ಗೆ ವಿಚಾರಗೋಷ್ಠಿ ನಡೆಯಲಿದ್ದು ದ.ಕ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಲಿದ್ದು, ಎಸ್.ಎನ್. ಅಬೂಬಕ್ಕರ್ ಮತ್ತು ಮನೋಜ್ ಮಿನೇಜಸ್ ವಿಷಯವನ್ನು ಮಂಡನೆ ಮಾಡಲಿರುವರು. ದ.ಕ ಜಿ.ಪಂ.ನ ಸದಸ್ಯ ರವೀಂದ್ರ ಕಂಬಳಿ, ಸಂಜೀವ ಪೂಜಾರಿ, ಗೋಪಾಲ ಆಚಾರ್ಯ ಉಪಸ್ಥಿತರಿರುವರು. ಕೃಷಿ ಅಧಿಕಾರಿ ನಾರಾಯಣ ಕೆ. ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಭತ್ತದ ಬೇಸಾಯದಲ್ಲಿ ಯಾಂತ್ರಿಕತೆಯ ವಿಚಾರ ಗೋಷ್ಠಿಯಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿದೇರ್ಶಕ ಕೆಂಪೇಗೌಡ ಅಧ್ಯಕ್ಷತೆಯನ್ನು ವಹಿಸಲಿದ್ದು, ಪ್ರಗತಿಪರ ಕೃಷಿಕ ಕರುಣಾಕರ ಆಚಾರ್ಯ ಕುತ್ಲೂರು ವಿಷಯ ಮಂಡನೆ ಮಾಡಲಿರುವರು. ಅನುಭವ ಹಂಚಿಕೆಯನ್ನು ಪ್ರಗತಿಪರ ಕೃಷಿಕ ರಮೇಶ ಮಾಡಲಿರುವರು. ವಿಟ್ಲ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಸುದರ್ಶನ ಜೈನ್ ಉಪಸ್ಥಿತರಿರುವರು. ಸಾಲೆತ್ತೂರು ವಲಯದ ಮೇಲ್ವಿಚಾರಕ ನವೀನ್ ಶೆಟ್ಟಿ ನಿರ್ವಹಣೆ ಮಾಡಲಿದ್ದಾರೆ. ಸಂಜೆ ಸ್ವ-ಸಹಾಯ ಸಂಘದ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ನಂತರ ಯಕ್ಷ ಭಜನೆ ನಡೆಯಲಿದ್ದು ಗಾಯಕರಾಗಿ ಯೋಗೀಶ್ ಅಳದಂಗಡಿ, ಧನಂಜಯ ಅಣ್ಣಳಿಕೆ, ಸುದರ್ಶನ್ ಶೆಟ್ಟಿ ಅರಳ, ಚೆಂಡೆಯಲ್ಲಿ ವೆಂಕಟೇಶ್ ಶೆಟ್ಟಿ ಮೂರ್ಜೆ, ಮದ್ದಳೆಯಲ್ಲಿ ಚಂದ್ರಶೇಖರ್ ಆಚಾರ್ಯ ಭಾಗವಹಿಸಲಿದ್ದಾರೆ ಹಾಗೂ ರಾತ್ರಿ ಕಿಶೋರ್ ಡಿ.ಶೆಟ್ಟಿಯವರ ನಿರ್ದೇಶನದಲ್ಲಿ ಲಕುಮಿ ತಂಡದ ಕುಸ್ದಲ ಕಲಾವಿದರು ಅಭಿನಯಿಸುವ ದುಂಬೊರಿ ಪಂತೆಗೆ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಜ.12ರಂದು ನಡೆಯಲಿರುವ ವ್ಯಸನಮುಕ್ತ ಕುಟುಂಬ ವಿಚಾರಗೋಷ್ಠಿಯಲ್ಲಿ ದ.ಕ ಜಿ. ಪಂ.ನ ಸದಸ್ಯ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸಲಿದ್ದು, ಧರ್ಮಸ್ಥಳ ಜ.ಜಾ.ವೇ.. ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ವಿಷಯ ಮಂಡನೆ ಮಾಡಲಿದ್ದಾರೆ. ಪಾರ್ವತಿ ವಿಟ್ಲ, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಂಟ್ವಾಳ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ. ಭಂಡಾರಿ, ಜಿ.ಪಂ.ನ ಸದಸ್ಯ ಮಮತಾ ಗಟ್ಟಿ, ಮಾಜಿ ಜಿ. ಪಂ.ನ ಸದಸ್ಯ ಸುಲೋಚನಾ ಜಿ.ಕೆ ಭಟ್ ಉಪಸ್ಥಿತರಿರುವರು. ಜ್ಞಾನ ವಿಕಾಸದ ಸಮಸ್ವಯಾಧಿಕಾರಿ ಜಯಂತಿ ನಿರ್ವಹಣೆ ಮಾಡಲಿರುವರು.
ಸಮಗ್ರ ತೋಟಗಾರಿಕಾ ಬೆಳೆಗಳು ವಿಚಾರ ಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್. ಆರ್ ಯೋಗೀಶ್ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ತಾಂತ್ರಿಕ ಅಧಿಕಾರಿ ಪುರಂದರ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಬಿ.ಎಸ್. ಚೆನ್ನಪ್ಪ ಪೂಜಾರಿ, ಜಿ.ಪಂ.ನ ಸದಸ್ಯ ಪದ್ಮಶೇಖರ ಜೈನ್, ಜಯಶಂಕರ ಬಾಸ್ರಿತ್ತಾಯ, ಬಂಟ್ವಾಳ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಕಿರಣ ಹೆಗ್ಡೆ ಉಪಸ್ಥಿತರಿರುವರು. ಮಾಣಿ ವಲಯದ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಲಾಭದಾಯಕ ಹೈನೋದ್ಯಮ ವಿಚಾರ ಗೋಷ್ಠಿಯಲ್ಲಿ ಮಾಣಿ ಪಶುವೈದ್ಯ ಆಸ್ಪತ್ರೆಯ ಸಕಾಯಕ ನಿರ್ದೇಶಕ ಡಾ| ಪ್ರಸನ್ನ ಕುಮಾರ್ ಟಿ.ಜಿ.ಅಧ್ಯಕ್ಷತೆ ವಹಿಸಲಿದ್ದು, ಬೆಂಜನಪದವು ಪಶುವೈದ್ಯಾಧಿüಕಾರಿ ಡಾ| ರವಿಕುಮಾರ್ ಎಂ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಸುರೇಶ ಗೌಡ ಪುಣಚ, ಜಿ.ಪಂ.ನ ಸದಸ್ಯ ಎಂ.ಎಸ್. ಮಹಮ್ಮದ್, ಬಂಟ್ವಾಳ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಬಂಟ್ವಾಳ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಉಮೇಶ ಆಚಾರ್ಯ ಉಪಸ್ಥಿತರಿರುವರು. ಬಂಟ್ವಾಳ ಕೃಷಿ ಅಧಿಕಾರಿ ನಾರಾಯಣ ಕೆ ಕಾರ್ಯಕ್ರಮವನ್ನು ನಿರ್ವಹಣೆ ಮಾಡಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಕೃಷಿ ಉತ್ಸವ ಸಮಿತಿಯ ಅಧ್ಯಕ್ಷ ರೊನಾಲ್ಡ್ ಡಿ’ಸೋಜಾ ಅಧ್ಯಕ್ಷತಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಹಾರ ಸಚಿವ ಯು.ಟಿ.ಖಾದರ್, ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ, ದ.ಕ ಜಿ.ಪಂ.ನ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ, ಶ್ರೀ.ಕ್ಷೇ.ಧ. ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿದೇರ್ಶಕ ಎಲ್.ಎಚ್. ಮಂಜುನಾಥ್, ಬಂಟ್ವಾಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ್, ಮಂಗಳೂರು ಕ್ಯಾಂಪ್ಕೊ ಲಿಮಿಟೆಡ್ನ ಅಧ್ಯಕ್ಷ ಎಸ್. ಸತೀಶ್ಚಂದ್ರ, ಬಂಟ್ವಾಳದ ಸೇಸಪ್ಪ ಕೋಟ್ಯಾನ್, ನರಿಕೊಂಬುವಿನ ಅಧ್ಯಕ್ಷ ನಿತ್ಯಾನಂದ ಸಪಲ್ಯ, ಬಂಟ್ವಾಳ ರೋಟರಿ ಕ್ಲಬ್ ನ ಅಧ್ಯಕ್ಷ ರಿತೇಶ್ ಬಾಳಿಗಾ, ಸದಾನಂದ ಗೌಡ ಉಪಸ್ಥಿತರಿರುವರು. ಚಿಣ್ಣರ ಲೋಕ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಬಿ.ಸಿ.ರೋಡಿನ ಎಕ್ಟ್ರೀಮ್ ಡ್ಯಾನ್ಸ್ ಕ್ರೀವ್ಸ್ರವರಿಂದ ನೃತ್ಯ ವೈವಿಧ್ಯ ನಡೆಯಲಿದೆ

