ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯದ ಪಂಚಕರ್ಮ ಸ್ನಾತಕೋತ್ತರ ವಿಭಾಗ ಆಶ್ರಯದಲ್ಲಿ ನವದೆಹಲಿಯ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ಸಹಯೋಗದೊಂದಿಗೆ ಜನವರಿ 9ರಿಂದ 14ರವರೆಗೆ ದೇಶದ ವಿವಿಧ ರಾಜ್ಯಗಳ ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿಗಳಿಗೆ ರಾಷ್ಟ್ರೀಯ ಪಂಚಕರ್ಮ ವಿಚಾರ ಸಂಕಿರಣವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಅನುದಾನದಲ್ಲಿ ಆಯೋಜಿಸಲಾಗಿದೆ.

2

ವಿವಿಧ ರಾಜ್ಯಗಳಿಂದ ಆಯ್ಕೆಯಾದ ಸೀಮಿತ ಆಯುರ್ವೇದ ವೈದ್ಯರುಗಳಿಗೆ ಪಂಚಕರ್ಮ ಚಿಕಿತ್ಸೆಗಳಲ್ಲಿ ಸಮಗ್ರ ಚಿಕಿತ್ಸೆ ಪ್ರಾಯೋಗಿಕ ಹಾಗೂ ಕೌಶಲ್ಯಗಳನ್ನು ಒದಗಿಸುವ  ಸಲುವಾಗಿ ಕಾರ್ಯಾಗಾರವನ್ನುಹಮ್ಮಿಕೊಳ್ಳಲಾಗಿದೆ.ತ್ರಿಪುರ, ಪಂಜಾಬ್, ಮೇಘಾಲಯ,ಉತ್ತರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಕರ್ನಾಟಕ ಮುಂತಾದ ರಾಜ್ಯಗಳ ಸರ್ಕಾರಿ ಆಯುರ್ವೇದ ವೈದ್ಯಾದಿಕಾರಿಗಳು ಈ ಕಾರ್ಯಗಾರದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ವಿನಯಚಂದ್ರ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *