ಸಿದ್ಧಕಟ್ಟೆ : ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2ನೇ ವಾರ್ಡ್ನ ಮಡಮೆ, ಕಂಡದಬೆಟ್ಟು, ಕಲ್ಕುರಿ ಎಂಬಲ್ಲಿ ಬೀದಿದೀಪವನ್ನು ಆಳವಡಿಸಲಾಗಿದೆ. ಸಚಿವ ಬಿ. ರಮಾನಾಥ ರೈ ಬೀದಿದೀಪ ಅಳವಡಿಕೆ ಕಾಮಗಾರಿಯನ್ನು ಶುಕ್ರವಾರ ಉದ್ಘಾಟನೆ ಮಾಡಿದರು. ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ದಿನೇಶ ಸುಂದರ ಶಾಂತಿ, ತಾ.ಪಂ. ಸದಸ್ಯ ಪ್ರಭಾಕರ ಪ್ರಭು, ಗೇರು ಅಭಿವೃದ್ಧಿ ನಿಗಮದ ನಿರ್ದೇಶಕ ಜಗದೀಶ ಕೊಯಿಲ, ಬಂಟ್ವಾಳ ತಾಲೂಕಿನ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸಮಾಜ ಸೇವಕ ಲಾರೆನ್ಸ್ ಮೆನೆಜಸ್,ಸ್ಥಳೀಯ ಪ್ರಮುಖರಾದ ಜಯಕರ ಶೆಟ್ಟಿ ಪರನೀರು, ಸದಾಶಿವ ಪೂಜಾರಿ ಉಳಿರೋಡಿ, ಗೋಪಾಲಕೃಷ್ಣ ಪ್ರಭು ಕಿನ್ನಾಜೆ, ವಿನ್ಸೆಂಟ್ ಡಿಸೋಜ, ಅಂಥೋನಿ ಡಿಸೋಜ ಉಪಸ್ಥಿತರಿದ್ದರು.
ಪ್ರತಿಕ್ರಿಯೆ:
“ ಈಗಾಗಲೇ ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಕೊಳೆಜಾಲ್ನಿಂದ ದೇವಸವರೆಗೆ 4 ಸೋಲಾರ್ ದೀಪ ಹಾಗೂ ಎಲಿಯನಡುಗೋಡು ಗ್ರಾಮದ ಉಪ್ಪಿರ ಎಂಬಲ್ಲಿನ ಎಸ್.ಟಿ. ಕಾಲೋನಿಯಲ್ಲಿ 4 ಸೋಲಾರ್ ದೀಪ ಅಳವಡಿಸಲಾಗಿದೆ. ಕುದ್ಕೋಳಿ ಯಿಂದ ಕಾನದವರೆಗೆ ಬೀದಿದೀಪದ ಅವಶ್ಯಕತೆಯಿದೆ. ಹೀಗಾಗಿ ಅತೀ ಶೀಘ್ರದಲ್ಲಿ ಬೀದಿದೀಪಗಳನ್ನು ಅಳವಡಿಸಲಾಗುವುದು. ಸಿದ್ಧಕಟ್ಟೆ ಚರ್ಚ್ ಬಳಿ ಹಾಗೂ ಕುದ್ಕೋಳಿ ಎಂಬಲ್ಲಿ 2 ಹೈಮಾಸ್ಕ್ ದೀಪದ ಅಳವಡಿಕೆಯ ಅವಶ್ಯಕತೆಯಿದೆ. ಈ ಕುರಿತಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ .”
-ದಿನೇಶ ಸುಂದರ ಶಾಂತಿ , ಅಧ್ಯಕ್ಷರು, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ.

