ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಸಂಘದ ಸದಸ್ಯರಿಗೆ 3 ನೇ ಹಂತದ ಗುರುತು ಚೀಟಿ ವಿತರಿಸುವ ಕಾರ್ಯಕ್ರಮ ವಿಟ್ಲದ ಮಾದರಿ ಶಾಲಾ ಸಭಾ ಭವನದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ಪೊಲೀಸ್ ಠಾಣಾಧಿಕಾರಿ ನಾಗರಾಜ್ ಗುರುತು ಚೀಟಿ ವಿತರಿಸಿದರು. ವೇದಿಕೆಯಲ್ಲಿ ರಾಯಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಪಿ ಪುಚ್ಚೆಗುತ್ತು, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಎಂ ಮಾಣಿಲ, ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಉಪಾಧ್ಯಕ್ಷೆ ದಿವ್ಯ ಕಲ್ಲಜೇರ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಂಗಾಧರ ನಾಯ್ಕ ಉಕ್ಕುಡ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುಪ್ರಿತಾ ಪಿಲಿಂಜ ಸ್ವಾಗತಿಸಿದರು. ಜತೆಕಾರ್ಯದರ್ಶಿ ಶಶಿಕಲಾ ವಂದಿಸಿದರು. ಚಂದ್ರಶೇಖರ್ ವಿಟ್ಲ ನಿರೂಪಿಸಿದರು. ಪ್ರಸಾದ್ ಅನಂತಾಡಿ ಸಹಕರಿಸಿದರು.

