ವಿಟ್ಲ: ದ .ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ರವರ `ಅಪ್ಪ ಅಮ್ಮ’ ನಿವಾಸದ ಗೃಹಪ್ರವೇಶದ ಪ್ರಯುಕ್ತ ಹಾಗೂ ಅವರ ಮನೆಯಲ್ಲಿ ನಡೆಯುವ ವರ್ಷಾವದಿ ಕೊರಗಜ್ಜ ದೈವದ ನೇಮೋತ್ಸವದ ಪ್ರಯುಕ್ತ ವಿಟ್ಲ ಪಡ್ನೂರು ಗ್ರಾಮದ ಕಡಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಸಂಚಾಲಕ ಗೋಪಾಲ್ ನೇರಳಕಟ್ಟೆ, ಕಾರ್ಯದರ್ಶಿ ಚಂದ್ರಶೇಖರ್ ಯು ವಿಟ್ಲ, ಮಾಜಿ ಜತೆಕಾರ್ಯದರ್ಶಿ ರಘು ನಾಯ್ಕ ದಡ್ಡಲತಡ್ಕ, ಸದಸ್ಯ ಮೋನಪ್ಪ ಗೋಳ್ತಮಜಲು, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹಸೈನಾರ್ ಕಡಂಬು, ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.
