ಸುದ್ದಿ9 ಕೈಕಂಬ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ ಎಸ್ ಎಫ್ ) ಕೈಕಂಬ ಸೆಕ್ಟರ್ ಇದರ ವತಿಯಿಂದ ಪ್ರತಿ ವರ್ಷ ನಡೆಯುವ ರಂಝಾನ್ ಸಿಲ್ ಸಿಲಾ ಕಾರ್ಯಕ್ರಮ ಜು.8 ರಂದು ಮಂಗಳವಾರ ಬೆಳಗ್ಗೆ 10.30ಕ್ಕೆ ಕೈಕಂಬ ಮೇಘಾ ಪ್ಲಾಜಾ ಹಾಲ್ನಲ್ಲಿ ಜರಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು/ಕೆ.ಎಚ್.ಯು.ಶಾಫಿ ಮದನಿ ಕಂದಾವರ, ಆತ್ಮಶುದ್ಧೀಕರಣದ ಪವಿತ್ರ ರಂಝಾನ್ ಎಂಬ ವಿಷಯದಲ್ಲಿ ಬಹು/ಯು.ಕೆ. ಯೂಸುಫ್ ಸಅದಿ ಮದರ್ರಿಸ್ ವಳವೂರು, ಪ್ರವಾದಿ ಪ್ರೇಮದ ಅನಿವಾರ್ಯತೆ ಎಂಬ ವಿಷಯದಲ್ಲಿ ಕೆ.ಎಚ್.ಯು.ಶಾಫಿ ಮದನಿ ಕಂದಾವರ, ತೌಬಾ, ತಸ್ಬೀಹ್ ನಮಾಝ್ ಹಾಗೂ ಈದ್ ಸಿದ್ದತೆ ಎಂಬ ವಿಷಯದಲ್ಲಿ ಬಹು/ಯು.ಕೆ.ಯೂಸುಫ್ ಸಅದಿ ಮಾತನಾಡಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶ ಏರ್ಪಡಿಸಲಾಗಿದೆ ಎಂದು ಸೆಕ್ಟರ್ ಕಾರ್ಯದರ್ಶಿ ಝ್ಯನುದ್ಧೀನ್ ಅಡ್ಡೂರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *