ಕೈಕಂಬ: ಸರಕಾರಿ ಶಾಲೆಗಳಲ್ಲಿ ದೊರೆಯುವ ಪ್ರತಿಯೊಂದು ಸೌಲಭ್ಯದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಮಂಗಳೂರು ಉತ್ತರ ವಲಯ ಶಾಸಕ ಬಿ.ಎ ಮೊೈದಿನ್ ಬಾವಾ ನುಡಿದರು.

30-vp-cycle-vbitarane

ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ ಇದರ ವತಿಯಿಂದ ದ.ಕ.ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಕಿಲೆಂಜಾರಿನಲ್ಲಿ ಡಿ.30ರಂದು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‍ಗಳನ್ನು ಹಸ್ತಾಂತರಿಸಿ ಮಾತನಾಡಿದರು.

c-2

ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕ ಯತಿರಾಜ್ ಕೆ., ಮಂಗಳೂರು ತಾ.ಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಕುಪ್ಪೆಪದವು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಸಿಸಿಲಿಯಾ, ಸದಸ್ಯರುಗಳಾದ ಅಬ್ದುಲ್ ಅಝೀಜ್ ಕುಪ್ಪೆಪದವು, ರಹಿಮಾನ್ ಕುಪ್ಪೆಪದವು, ಗ್ರಾ.ಪಂ ಸದಸ್ಯರಾದ ಅಬುಬಕ್ಕರ್ ಕಲ್ಲಾಡಿ, ಹಿರಣ್ಯಾಕ್ಷ ಕೋಟ್ಯಾನ್, ಜಿ.ಪಂ ಮಾಜಿ ಸದಸ್ಯರಾದ ಕೃಷ್ಣ ಅಮೀನ್, ಗಂಜಿಮಠ ಗ್ರಾ.ಪಂ. ಉಪಾಧ್ಯಕ್ಷ ಝಾಕೀರ್, ಸದಸ್ಯರಾದ ಬಾದಷಾಹ ಇಂಡಿ, ರಫೀಕ್ ಆಚಾರಿಚೋರ, ಎಲ್. ಉಮರಬ್ಬ, ರಾಮಚಂದ್ರ ಸಾಲಿಯಾನ್, ಲತೀಫ್ ಆಚಾರಿಚೋರ, ಕುಪ್ಪೆಪದವು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಸಿ.ನವೀನ್, ಮಕ್ಕಳ ಪೋಷಕರು, ಸಹಶಿಕ್ಷಕರು ಉಪಸ್ಥಿತರಿದ್ದು ಸಹಶಿಕ್ಷಕಿ ಮಧುಮಾಲತಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *