ಬಂಟ್ವಾಳ: ತುಂಬೆ ಡ್ಯಾಂನಲ್ಲಿ ಸಂತ್ರಸ್ತ ರೈತರಿಗೆ ಚಿಕ್ಕಾಸು ಪರಿಹಾರ ನೀಡದೆ ಈ ಹಿಂದೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಟ್ಟಾರೆಯಾಗಿ ಸರಕಾರ ನೀಡಿದ ಲಿಖಿತ ಭರವಸೆಯನ್ನು ಮೀರಿ ನೀರು ಸಂಗ್ರಹಿಸಿ ಕೃಷಿಕರಿಗಾದ ಅನ್ಯಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬೆ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಪತ್ರ ಮುಖೇನ ರೈತರಿಗಾದ ಕಷ್ಟಗಳನ್ನು ವಿವರಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದರು.

manavi

ಇದಕ್ಕೆ ಸ್ಪಂದಿಸಿದ ಪ್ರಧಾನಿ ಅವರು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೈಗೊಂಡ ಪರಿಹಾರೋಪಾಯಗಳ ಬಗ್ಗೆ ಕೂಡಲೇ ಮಾಹಿತಿಯನ್ನು ತಮ್ಮ ಕಛೇರಿ ಹಾಗೂ ಅರ್ಜಿದಾರರಿಗೆ ನೀಡುವಂತೆ ನಿರ್ದೇಶಿಸಿದ್ದಾರೆ.ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂತ್ರಸ್ತ ರೈತರ ಪರವಾಗಿ ಎಂ.ಸುಬ್ರಹ್ಮಣ್ಯ ಭಟ್ ಅವರು ತನ್ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *