ಮಂಗಳೂರು: ಎಸ್. ಡಿ. ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮನವರ ಸ್ಮರಾಣಾರ್ಥ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶೇಷ ಸಾಮರ್ಥ್ಯವುಳ್ಳ ಶಾಲೆಗಳ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಕಲೋತ್ಸವ 2016, ಪಾರ್ವತಿ ಬಾಬು ಶೆಟ್ಟಿ ಸಭಾಂಗಣದಲ್ಲಿದಿನಾಂಕ 23-12-2016ರಂದು ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಉದಯವಾಣಿ ಮಂಗಳೂರು ಬ್ಯೂರೋದ ಮುಖ್ಯಸ್ಥರಾದ ಶ್ರೀ ಮನೋಹರ್ ಪ್ರಸಾದ್‍ಮಾತನಾಡುತ್ತಾ ಹುಟ್ಟು ಸಾವಿನ ಮದ್ಯೆ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕಿಯು ತನ್ನ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಅರ್ಪಿಸಿದಾಗ ತನ್ನ ಜೀವನ ಸಾರ್ಥಕವಾಗುತ್ತದೆ.ಎಸ್. ಡಿ. ಎಂ.ಮಂಗಳ ಜ್ಯೋತಿ ಸಮಗ್ರ ಶಾಲೆಯ ಸೇವಾಕಾರ್ಯವುಯಾವುದೇ ಪ್ರಾರ್ಥನಾ ಮಂದಿರದ ಸೇವಾಕಾರ್ಯಕ್ಕೆ ಕಡಿಮೆಯಲ್ಲ. ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿ ಇರುವಂತಹ ಪ್ರತಿಭೆಯನ್ನು ಹೊರ ಹಾಕುವುದಕ್ಕೆಕಲೋತ್ಸವ 2016 ಸೂಕ್ತ ವೇದಿಕೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾದ ಕಾರ್ಪೋರೇಶನ್ ಬ್ಯಾಂಕ್ ಪ್ರಧಾನಕಛೇರಿ ಮಂಗಳೂರಿನ ಡಿ.ಜಿ.ಎಮ್. ಶ್ರೀ ಜಿ. ಎಂ.ಬೆಲ್ಲದ್ ಮಾತನಾಡುತ್ತಾ ಎಸ್. ಡಿ. ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆಯ ವಿಶೇಷ ಮಕ್ಕಳ ಜೊತೆ ಸೇವೆ ಮಾಡಲು ತುಂಬಾ ಸಂತೋಷವಾಗುತ್ತದೆ. ಮುಂದಿನ ದಿನದಲ್ಲಿ ಕಾರ್ಪೋರೇಶನ್ ಬ್ಯಾಂಕ್ ವಿಶೇಷ ಮಕ್ಕಳ ಸೇವೆಯನ್ನು ಮುಂದುವರಿಸಲಿದೆಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೋ.ಎ. ರಾಜೇಂದ್ರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದಕ್ಷಿಣಕನ್ನಡ ಮತ್ತುಉಡುಪಿ ಜಿಲ್ಲೆಯಒಟ್ಟು 8 ವಿಶೇಷ ಸಾಮಥ್ರ್ಯ ಶಾಲೆಯ ವಿದ್ಯಾರ್ಥಿಗಳು ಚಿತ್ರಕಲೆ, ಸಂಗೀತ, ಛಧ್ಮವೇಷ, ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿಕಾರ್ಪೋರೇಶನ್ ಬ್ಯಾಂಕ್ ಪ್ರಧಾನಕಛೇರಿ ಮಂಗಳೂರಿನ ಎ.ಜಿ.ಎಮ್.ಶ್ರೀ ಜಾನಕಿರಾಮ್,ತಿರುವೈಲುಕ್ಲಸ್ಟರ್‍ನ ಸಿ.ಅರ್. ಪಿ. ಶ್ರೀಮತಿ ರೂಪಲತಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯಿನಿ ಶ್ರೀಮತಿ ಮಾರ್ಯೇಟ್ ಮಸ್ಕರೇನಸ್, ಐ.ಟಿ.ಐ. ಪಾಂಶುಪಾಲರಾದ ಶ್ರೀ ನರೇಂದ್ರ, ಚೈಲ್ಡ್‍ಫಂಡ್‍ನಯೋಜನಾಧಿಕಾರಿ ಶ್ರೀ ಪುನೀತ್ ಡಿ. ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತಾಧಿಕಾರಿಯಾದ ಶ್ರೀ ಗಣೇಶ್ ಭಟ್ ವಿ.ಸ್ವಾಗತಿಸಿದರು ಪ್ರೌಢ ಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀ ಆಶೋಕ್ ಕುಮಾರ್ ವಂದಿಸಿದರು.ರಮೇಶ್ ಆಚಾರ್‍ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಟ್ರೋಪಿಗಳನ್ನು ವಿತರಿಸಲಾಯಿತು.

ಸಾಂಸ್ಕೃತಿಕ ನೃತ್ಯ : ಪ್ರಥಮ- ಸಾನಿಧ್ಯ ವಸತಿ ಶಾಲೆ ಮತ್ತು ತರಬೇತಿ ಸಂಸ್ಥೆ, ದ್ವಿತೀಯ- ಶ್ರೀಮತಿ ಮೋಹಿನಿ ಅಪ್ಪಾಜಿನಾೈಕ್ ಸ್ಮಾರಕ ಅಳ್ವಾಸ್ ವಿಶೇಷ ಶಾಲೆ, ತೃತೀಯ-ಲಯನ್ಸ್ ವಿಶೇಷ ಶಾಲೆ ಸುರತ್ಕಲ್, ಸಮಾಧಾನಕರ ಬಹುಮಾನ ವಿಜೇತ ವಿಶೇಷ ಶಾಲೆ ಉಡುಪಿ
ಛಧ್ಮವೇಷ : ಪ್ರಥಮ- ಪ್ರಕಾಶ್ ವಿಜೇತ ವಿಶೇಷ ಶಾಲೆ ಉಡುಪಿ, ದ್ವಿತೀಯ-ದೀಕ್ಷಿತ ಸನೀಲ್ ಲಯನ್ಸ್ ವಿಶೇಷ ಶಾಲೆ ಸುರತ್ಕಲ್, ತೃತೀಯ-ಕವಿತಆಸರೆ ಬುದ್ಧಿಮಾಂಧ್ಯ ಶಾಲೆ ಹಾಗೂ ಪುನರ್ವಸತಿ ಶಾಲೆ ಮಣಿಪಾಲ,
ಚಿತ್ರಕಲೆ : ಪ್ರಥಮ-ಆಶ್ರಯ್‍ಚೇತನ ವಿಶೇಷ ಶಾಲೆ ಕಾರ್ಕಳ, ದ್ವಿತೀಯ-ಅಕ್ಷಯ್ ವಿಜೇತ ವಿಶೇಷ ಶಾಲೆ ಉಡುಪಿ,
ಸಂಗೀತ : ಪ್ರಥಮ-ಮಂಜುನಾಥಚೇತನ ವಿಶೇಷ ಶಾಲೆ ಕಾರ್ಕಳ, ದ್ವಿತೀಯ-ರಾಕೇಶ್‍ರೋಮನ್ ಮತ್ತುಕ್ಯಾಥರಿನ್ ಲೋಬೋ ಅಂಧ ಮಕ್ಕಳ ಶಾಲೆ, ಕೋಟೆಕಣಿ, ತೃತೀಯ- ಶಿವಾನಂದ ವಿಜೇತ ವಿಶೇಷ ಶಾಲೆ ಉಡುಪಿ.

