ಮೂಡುಬಿದಿರೆ : ಕಳೆದ ಕೆಲವು ವರ್ಷಗಳಿಂದ ದುರಸ್ಥಿ ಕಾಣದೆ ಸಂಪೂರ್ಣವಾಗಿ ಹಾಳಾಗಿರುವ ಕಡಂದಲೆ ಗ್ರಾಮದ ಜೋಡುಕಟ್ಟೆ-ಮುಕ್ಕಡಪ್ಪು ರಸ್ತೆಯನ್ನು ನಾಗರಿಕಾ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಾರ್ಜ್ ಮೋನಿಸ್ ಅವರ ನೇತೃತ್ವದಲ್ಲಿ ಬುಧವಾರದಂದು ರಸ್ತೆಯ ಹೊಂಡಗಳಿಗೆ ಮಣ್ಣು ಹಾಕಿ ತಾತ್ಕಾಲಿಕವಾಗಿ ಹೊಂಡ ಮುಚ್ಚುವ ಶ್ರಮದಾನವನ್ನು ಮಾಡಲಾಯಿತು.

mbd-21

ಈ ರಸ್ತೆಯು ಸುಮಾರು 20ವರ್ಷಗಳಿಂದ ಯಾವುದೇ ಅಭಿವೃದ್ಧಿಯನ್ನು ಕಾಣಿರಲಿಲ್ಲ. ಜೋಡುಕಟ್ಟೆ-ಮುಕ್ಕಡಪ್ಪು ರಸ್ತೆಯು ಮೂಡುಬಿದಿರೆ-ಬೆಳ್ಮಣ್ ಮುಖ್ಯ ರಸ್ತೆಯಿಂದ ಸುಮಾರು 5 ಕಿ.ಮೀ ನಷ್ಟು ಸಂಪೂರ್ಣ ಹಾಳಾಗಿದ್ದು, ಈ ಪರಿಸರದ ದೈನಂದಿನ ಕೆಲಸ ಕಾರ್ಯಗಳಿಗೆ, ಶಾಲಾ ಮಕ್ಕಳಿಗೆ, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಮತ್ತು ಅನಾರೋಗ್ಯ ಪೀಡಿತ ಗ್ರಾಮಸ್ಥರನ್ನು ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಿಗೆ ಸಾಗಿಸಲು ಅನಾನುಕೂಲವಾಗಿರುತ್ತದೆ.

ಈ ಬಗ್ಗೆ ಜಿ.ಪಂ ಮತ್ತು ತಾ.ಪಂ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಂಡಿದ್ದರು ಮತ್ತು ಅದಕ್ಕೆ ಸಂಬಂಧಿಸಿದ ಪತ್ರಗಳನ್ನು ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಸಭೆ ಕರೆದು ರಸ್ತೆಯನ್ನು ದುರಸ್ಥಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆಂದು ಭರವಸೆಯನ್ನು ನೀಡಿದ್ದರು. ಆದರೆ ಚುನಾವಣೆ ಮುಗಿದ ನಂತರ ಈ ರಸ್ತೆ ದುರಸ್ಥಿಗೆ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಆದ್ದರಿಂದಾಗಿ ಸುಮಾರು 30ಜನ ಗ್ರಾಮಸ್ಥರೇ ಸೇರಿ 1 ಜೆಸಿಬಿ, 1 ಟಿಪ್ಪರ್ ಹಾಗೂ 1 ಟ್ರಕ್ಟರ್ ಬಳಸಿ ಈ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ಥಿ ಮಾಡಲಾಯಿತು. ಅಲ್ಲದೆ ಈ ರಸ್ತೆಯು ಅರಣ್ಯ ಪ್ರದೇಶದಲ್ಲಿರುವುದರಿಂದ ಸೂಕ್ತವಾದ ದಾರಿದೀಪದ ವ್ಯವಸ್ಥೆಯನ್ನು ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *