ಕೈಕಂಬ:ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಏಕಾಹ ಭಜನೆಯು ಡಿ.17ರಂದು ಶನಿವಾರ ದೀಪ ಪ್ರಜ್ವಲನೆ ಗೊಂಡಿತು. ಬೆಳಿಗ್ಗೆ 8 ಗಂಟೆಯಿಂದ ಮರುದಿನ ಭಾನುವಾರ ಬೆಳಿಗ್ಗೆ 8 ಗಂಟೆ ತನಕ ನಿರಂತರ 24 ಗಂಟೆಗಳ ಭಜನಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ ಬೆಂಜನಪದವು, ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಪ್ರೇಮನಾಥ್ ಪೊಳಲಿ, ಪ್ರಶಾಂತ್ ಕೊಟ್ಟಾರಿ, ಸುರೇಶ್ ಬೆಂಜನಪದವು, ಉಮೇಶ್ , ಪ್ರವೀಣ್, ಮುರಳಿ, ಚಂದ್ರಶೇಖರ ಸುವರ್ಣ, ಈಶ್ವರ ಬೆಂಜನಪದವು ಮತ್ತಿತರು ಇದ್ದರು.



