ಬೆಂಗಳೂರು: ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮ ದಿನದ ಪ್ರಯುಕ್ತ ಆಚರಿಸಲಾಗುವ “ಈದ್ ಮಿಲಾದ್’ಗೆ ಡಿ. 12ಕ್ಕೆ ನೀಡಲಾಗಿದ್ದ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿ, ಅದರ ಬದಲಿಗೆ ಡಿ. 13ರಂದು ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ರಾಜ್ಯ ಸರಕಾರ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಈದ್ ಮಿಲಾದ್ ರಜೆಯನ್ನು 2016ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ಡಿ. 12ಕ್ಕೆ ಘೋಷಿಸ ಲಾಗಿತ್ತು (ಸೋಮವಾರ). ಆದರೆ, ಸೆಂಟ್ರಲ್ ಮೂನ್ ಕಮಿಟಿಯ ಅಭಿ ಪ್ರಾಯದಂತೆ ಡಿ. 12ರ ರಜೆಯನ್ನು ರದ್ದುಪಡಿಸಿ, ಡಿ. 13(ಮಂಗಳವಾರ)ಕ್ಕೆ ಸಾರ್ವತ್ರಿಕ ರಜೆ ಘೋಷಣೆ ಮಾಡ ಲಾಗಿದೆ ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಕೋರ್ಟ್ ಸೋಮವಾರ ರಜಾ : ಸರಕಾರ ಮೊದಲು ಸೋಮವಾರ ರಜಾ ಘೋಶಿಸಿದ್ದರಿಂದ ಕರ್ನಾಟಕ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಿಗೆ ಸೋಮವಾರವೇ ರಜಾ ಪ್ರಕಟಿಸಲಾಗಿತ್ತು. ಆದರೆ, ಕಕ್ಷಿದಾರರಿಗೆ, ನ್ಯಾಯವಾದಿಗಳಿಗೆ, ನ್ಯಾಯಮೂರ್ತಿಗಳಿಗೆ ಅನನುಕೂಲವಾಗುತ್ತದೆಂದು ಮಂಗಳವಾರದ ಬದಲು ಸೋಮವಾರವೇ ನ್ಯಾಯಾಲಯಗಳಿಗೆ ರಜಾ ನೀಡಲಾಗಿದೆ.
ಮಂಗಳವಾರ ಕೋರ್ಟ್ ಕಲಾಪಗಳು ಎಂದಿನಂತೆ ನಡೆಯಲಿದ್ದು, ಈದ್ ಮಿಲಾದ್ ಆಚರಿಸಲೇಬೇಕು ಎಂದು ಇಚ್ಛಿಸುವವರು ವಿಶೇಷ ಕ್ಯಾಶುವಲ್ ರಜಾಗೆ ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಅಶೋಕ್ ಜಿ. ನಿಜಗಣ್ಣವರ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಹೀಗಾಗಿ ಮಂಗಳವಾರವೂ ಕೋರ್ಟ್ ಕಲಾಗಳು ನಡೆಯುವುದು ಅನುಮಾನವೆ.

