ಬಂಟ್ವಾಳ: ನರಿಕೊಂಬು ವಿವೇಕಪುರ ವಿವೇಕ ಜಾಗೃತ ಬಳಗದ ವತಿಯಿಂದ ಶ್ರೀ ಗುರೂಜೀ ಸ್ವಾಮಿ ವಿವೇಕಾನಂದರ ವಿವೇಕ ಕಿರಣ ಮಂದಿರದ ಅಷ್ಟಮ ವರ್ಧಂತ್ಯುತ್ಸವ ಹಾಗೂ ಶ್ರೀ ಗುರು ಚರಿತಾಮೃತ ಪ್ರವಚನ ಸಪ್ತಾಹ ಕಾರ್ಯಕ್ರಮವು ಡಿ.11ರಿಂದ ಡಿ.18ರವರೆಗೆ ನರಿಕೊಂಬು ವಿವೇಕ ಕಿರಣ ಮಂದಿರದಲ್ಲಿ ಜರಗಲಿದೆ.

pravachaana

ಕಾರ್ಯಕ್ರಮದ ಪ್ರಯುಕ್ತ ಪ್ರತಿದಿನ ಸಂಜೆ 5 ರಿಂದ ಮೈಸೂರು ಕೇಂದ್ರೀಯ ಭಾಷಾ ಸಂಸ್ಥಾನಂ ಇದರ ಭಾಷಾ ಅನುವಾದಕ ವೇ.ಮೂ.ವಾಸುದೇವ ಲ.ಭಟ್ ಇವರಿಂದ ಶ್ರೀ ಗುರು ಚರಿತಾಮೃತ ಪ್ರವಚನ ಸಪ್ತಾಹ ನಡೆಯಲಿದೆ. ಡಿ.11ರಂದು ಮಧ್ಯಾಹ್ನ 2.30ಕ್ಕೆ ಶ್ರೀ ಕ್ಷೇತ್ರ ಕಟೀಲಿನ ಪ್ರ.ಅರ್ಚಕ ವೇ.ಮೂ.ಕಮಲಾದೇವಿಪ್ರಸಾದ ಆಸ್ರಣ್ಣ ಅವರು ಸಪ್ತಾಹವನ್ನು ಉದ್ಘಾಟಿಸಲಿರುವರು.

ಡಿ.18ರಂದು ವರ್ಧಂತ್ಯುತ್ಸವ ನಡೆಯಲಿದ್ದು ಸಂಜೆ ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಜಯಂತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಾಲಿಗ್ರಾಮ ಡಿವೈನ್ ಪಾರ್ಕ್‍ನ ಸುದೇಶ್ ರಾವ್,ಯುವ ಬ್ರಿಗೇಡ್ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಅತಿಥಿಗಳಾಗಿ ಭಾಗವಹಿಸಲಿರುವರು. ಮಧ್ಯಾಹ್ನ 1.30ರಿಂದ ಯಕ್ಷ ಗೀತ ವೈಭವ , ಸಂಜೆ ಸಾಂಸ್ಕೃತಿಕ ಸಂಧ್ಯಾ,ಶಿವ ಪಂಚಾಕ್ಷರಿ ಮಹಾತ್ಮೆ ಯಕ್ಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *