ವಿಟ್ಲ: ನವಗ್ರಾಮದ 27 ಮನೆಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊರೆಸಿದ ಕೊಳವೆ ಬಾವಿಯ ನೀರನ್ನು ಪೆರುವಾಯಿ ಪೇಟೆಗೆ ಕೊಂಡೊಯ್ಯುತ್ತಿರುವುದು ನವಗ್ರಾಮ ನಿವಾಸಿಗಳನ್ನು ರೂಚ್ಚಿಗೆಬ್ಬಿಸಿದ ಘಟನೆ ಮುಚ್ಚಿರಪದವಿನಲ್ಲಿ ಭಾನುವಾರ ನಡೆದಿದೆ.

tank-2

ಪೆರುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಚ್ಚಿರಪದವಿನಲ್ಲಿ ವಸತಿ ರಹಿತರ ಕಾಲನಿಯಿದ್ದು, ಸುಮಾರು 27ಕ್ಕೂ ಅಧಿಕ ಕುಟುಂಬಗಳು ವಾಸವಾಗಿದೆ. ಎಲ್ಲಾ ಮನೆಗಳಿಗೂ ಪ್ರತ್ಯೇಕ ನೀರಿನ ಸೌಲಭ್ಯವಿಲ್ಲದೆ ಹಿಂದಿನಿಂದಲೂ ಇರುವ ಕೈ ಪಂಪ್ ಮಾತ್ರ ಬಳಸಲಾಗುತ್ತಿತ್ತು.

ಎರಡು ವರ್ಷಗಳ ಹಿಂದೆ ನವಗ್ರಾಮದ ಮನೆಗಳಿಗೆ ನೀರು ಪೂರೈಕೆಗೆ ಸಹಾಯವಾಗಿಸುವ ನಿಟ್ಟಿನಲ್ಲಿ ಟ್ಯಾಂಕ್ ನಿರ್ಮಿಸಿದ್ದು, ನಿರುಪಯುಕ್ತವಾಗಿ ಉಳಿದಿತ್ತು. ವರ್ಷದ ಹಿಂದೆ ನವಗ್ರಾಮದ ಜನರಿಗೆ ನೀರು ಪೂರೈಸುವ ನಿಟ್ಟಿನಲ್ಲಿ ಅಳಿಕೆ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಪೆರುವಾಯಿ ಗ್ರಾಮ ಪಂಚಾಯಿತಿ ಕೊಳವೆ ಬಾವಿ ಕೊರೆಸಿತ್ತು.

ಜಾಗದ ತಕರಾರು ಬಂದ ಹಿನ್ನಲೆಯಲ್ಲಿ ಕೊಳವೆ ಬಾವಿಯೂ ಬಳಕೆಯಾಗದೆ ಉಳಿದಿತ್ತು. ಎರಡು ಪಂಚಾಯಿತಿಗಳ ನಡುವೆ ಮಾತುಕತೆ ನಡೆದು ಕಾಲನಿ ಮಂದಿಗೆ ಉಪಯೋಗಿಸುವ ಉದ್ದೇಶ ಮಾತ್ರವಾದರೆ ಕೊಳವೆ ಬಾವಿಯನ್ನು ಬಳಸಲು ಅಳಿಕೆ ಪಂಚಾಯಿತಿ ಸಮ್ಮತಿಯನ್ನು ಸೂಚಿಸಿತ್ತು.

ಒಪ್ಪಂದವನ್ನು ಮುರಿದ ಪೆರುವಾಯಿ ಪಂಚಾಯಿತಿ ಎರಡು ದಿನಗಳಿಂದ ನವ ಗ್ರಾಮ ಜನರಿಗೆ ನೀರು ನೀಡದೆ ಪೆರುವಾಯಿ ಪೇಟೆ ಹಾಗೂ ಮುಚ್ಚಿರಪದವು ರಸ್ತೆ ಬದಿಯ ಮನೆಗಳಿಗೆ ನೀರು ಪೂರೈಕೆಗೆ ಮುಂದಾಗಿದ್ದಾರೆ. ಎರಡು ವರ್ಷದಿಂದ ಟ್ಯಾಂಕ್ ಉಪಯೋಗಿಸದೆ ಈಗ ನೀರು ಹಾಕಿದ್ದರಿಂದ ಅದರಲ್ಲೂ ನೀರು ಸೋರಿಕೆಯಾಗುತ್ತಿದೆ.

tank

ಹೊಸ ಕೊಳವೆ ಬಾವಿಯ ಪಂಪ್ ಚಾಲನೆಗೊಳ್ಳುತ್ತಿದ್ದಂತೆ ಕೈ ಪಂಪ್ ಅಳವಡಿಸಿದ ಹಳೆಯ ಕೊಳವೆ ಬಾವಿಯ ನೀರು ಆರುತ್ತಿದೆ. ಇದರಿಂದ ನವಗ್ರಾಮದ ನಿವಾಸಿಗಳು ರೊಚ್ಚಿಗೆದ್ದು, ನಮಗೆ ಮೀಸಲಿರಿಸಿದ ನೀರನ್ನು ಬೇರೆ ಕಡೆ ತೆಗೆದುಕೊಂಡು ಹೋಗುವುದಾದರೆ ನಾವು ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂಬ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ.

By Suddi9

Leave a Reply

Your email address will not be published. Required fields are marked *