ಕೈಕಂಬ: ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಸೋಮವಾರದಂದು ವಿಶೇಷ ಭಜನೆ, ಪೂಜಾ ವಿದಿ-ವಿಧಾನಗಳು ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಪರಮಪೂಜ್ಯ ರಾಜಯೋಗಿ ಶ್ರೀ ನಿರ್ಮಲನಾಥ್ ಜಿ. ಮಹಾರಾಜ್ ಮಠಾಧಿಪತಿಗಳು ಕದಲೀ ಜೋಗೀಶ್ವರ ಜೋಗಿಮಠ ಕದ್ರಿ ಇವರು ದೇವಳಕ್ಕೆ ಆಗಮಿಸಿದ್ದರು. ಭಕ್ತಾಧಿಗಳು ಮಠಾಧಿಪತಿಯ ಪಾದ ಪೂಜೆ ನೆರವೇರಿಸಿದರು. ಮಹಾಪೂಜೆಯ ಸೇವಾರ್ಥಿ ಸುಜಿತ್ ಆಳ್ವ ಏತಮೊಗರುಗುತ್ತು, ಮತ್ತು ಸದಾನಂದ ಮಳ್ಳಿ ಪೂಜೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ಹಾಗೂ ಅಧ್ಯಕ್ಷ ಉಮೇಶ್‍ನಾಥ್ ಕದ್ರಿ ಹಾಗೂ ದೇವಳದ ಮುಕ್ತೇಸರ ಗಂಗಾಧರ ಜೋಗಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಹರೀಶ್ ಮಟ್ಟಿ, ಕೋಶಾಧಿಕಾರಿ ದಿನೇಶ್ ಶೆಟ್ಟಿ , ಶೇಖರ ಜೋಗಿ ಕಿನ್ನಿಕಂಬಳ, ಜಯರಾಮ್ ಆಳ್ವ, ನಾಗೇಶ್ ಜೋಗಿ, ಚಂದ್ರಹಾಸ ಜೋಗಿ, ವಿಶ್ವನಾಥ ಪೂಜಾರಿ ಮಟ್ಟಿ, ಉಮಾಶಂಕರ ಸುಲಾಯ, ಹರೀಶ್ ಕೊಲಂಬೆ ಉಪಸ್ಥಿತರಿದ್ದರು.







