ಬಂಟ್ವಾಳ: ತಾಲ್ಲೂಕಿನಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಡಿ.5ರಂದು ವಾರ್ಷಿಕ ಷಷ್ಠಿ ಮಹೋತ್ಸವ ನಡೆಯಲಿದೆ.

download

ಡಿ.3ರಂದು ಬೆಳಿಗ್ಗೆ 9ಗಂಟೆಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪವಮಾನ ಮತ್ತು ಕಲಶಾಭಿಷೇಕ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7ಗಂಟೆಗೆ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಸದಸ್ಯರಿಂದ ಭಜನೆ, ರಾತ್ರಿ 8ಗಂಟೆಗೆ ಮಹಾಪೂಜೆ ನಡೆಯಲಿದೆ.

ಡಿ.4ರಂದು ಬೆಳಿಗ್ಗೆ 9ಗಂಟೆಗೆ ಪವಮಾನ ಮತ್ತು ನವಕ ಕಲಶಾಭಿಷೇಕ, ಗಣಹೋಮ, ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 5ಗಂಟೆಗೆ ಮಕ್ಕಳ ತಂಡದಿಂದ ಭಜನೆ, ರಾತ್ರಿ 8ಗಂಟೆಗೆ ರಂಗಪೂಜೆ ಮತ್ತು ಪಂಚಮಿ ಉತ್ಸವ ನಡೆಯಲಿದೆ.

ಡಿ.5ರಂದು ಬೆಳಿಗ್ಗೆ 5ಗಂಟೆಗೆ ಉಷಾಪೂಜೆ, 7ಗಂಟೆಗೆ ಪಂಚಾಮೃತ ಮತ್ತು ಪವಮಾನ ಅಭಿಷೇಕ, 8ಗಂಟೆಗೆ ಸ್ಕಂದ ಯಾಗ, 9ಗಂಟೆಗೆ ಸಾಮೂಹಿಕ ಆಶ್ಲೇಷ ಬಲಿ, 9.30ರಿಂದ ಷಷ್ಠಿ ಮಹೋತ್ಸವ, 1ಗಂಟೆಗೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಅಂದು ಸಂಜೆ 4ಗಂಟೆಗೆ ಇಲ್ಲಿನ ಮೈಸಂದಾಯ ದೈವದ ನೇಮೋತ್ಸವ, 6ಗಂಟೆಗೆ ಭಜನೆ, ರಾತ್ರಿ 7ಗಂಟೆಗೆ ದುರ್ಗಾ ನಮಸ್ಕಾರ ಮತ್ತು ಮಹಾಪೂಜೆ ಹಾಗೂ ರಾತ್ರಿ ಗಂಟೆ 7.30ರಿಂದ ಪರಿವಾರ ದೈವಗಳಾದ ರಕ್ತೇಶ್ವರಿ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *