ನವದೆಹಲಿ: ರೈಲಿನಲ್ಲಿ ಪ್ರತಿ ರಾತ್ರಿ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆಯು “ನಿದ್ದೆಯಿಂದೆಬಿಸುವ ಕರೆ“ಯೊಂದನ್ನು ಪರಿಚಯಿಸಿದೆ.
ನೀವು ರೈಲ್ವೇಯಿಂದ ಇಳಿಯುವ ಸ್ಟೇಶನ್ ಅರ್ಧರಾತ್ರಿ ಕಳೆದೋ, ನಸುಕಿನ ಮುಂಚೆಯೂ ಅಥವಾ ಬೆಳಗ್ಗಿನ ವೇಳೆ ಇದೆ ಎಂದಾದರೆ, ಜೋರಾಗಿ ನಿದ್ದೆ ಬಂದು ಬಿಟ್ಟರೆ ಅದಕ್ಕಾಗಿ ನೀವು ಗಮ್ಯ ಸ್ಥಾನ ತಲುಪುವುದಕ್ಕಿಂತ ಅರ್ಧಗಂಟೆ ಮೊದಲು ” ನಿದ್ದೆಯಿಂದೆಬಿಸುವ ಕರೆ“ಯೊಂದನ್ನು ರೈಲ್ವೇ ಪರಿಚಯಿಸಿದೆ.
ನಿಮ್ಮ ಮೊಬೈಲ್ ಫೋನಿನಿಂದ 139 ಸಂಖ್ಯೆಗೆ ಕರೆ ಮಾಡಿದರೆ, ಭಾಷೆ ಆಯ್ಕೆ ಮಾಡಿಕೊಂಡ ಬಳಿಕ ನಮೂದಿಸಲು ಹೇಳಿದಾಗ ನಿಮ್ಮ ಟಿಕೆಟ್‍ನ “ಪಿಎನ್ ಆರ್” ಸಂಖ್ಯೆ ದಾಖಲಿಸಿ, “ 1″ ಒತ್ತಿದರೆಯಾಯಿತು. ಇಳಿಯುವ ಸ್ಥಳಕ್ಕೆ ರೈಲು ತಲುಪುವ ಅರ್ಧ ಗಂಟೆ ಮೊದಲು ಫೋನ್ ರಿಂಗ್ ಆಗುವ ಮೂಲಕ ನಿಮ್ಮನ್ನು ನಿದ್ದೆಯಿಂದ ಎಬ್ಬಿಸುತ್ತದೆ.

