ಬಂಟ್ವಾಳ : ಇವತ್ತು ಕ್ಲಪ್ತ ಸಮಯಕ್ಕೆ ಜನರಿಗೆ ಕಾನೂನು ಸಿಗುತ್ತಾ ಇಲ್ಲ. ಕಾನೂನು ಎಲ್ಲಾ ರೀತಿಯಲ್ಲಿ ಸಿಗಬೇಕಾದರೆ ಅದಕ್ಕೆ ಸೂಕ್ತ ರೀತಿಯ ವ್ಯವಸ್ಥೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸರಕಾರದ ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ಗೌ/ಹಿರಿಯ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಯು. ನುಡಿದರು.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ, ತಾ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ , ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ , ಬಂಟ್ವಾಳ ಪತ್ರಕರ್ತರ ಸಂಘ, ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಸಂಚಾರಿ ನ್ಯಾಯಾಲಯದ ಅಭಿಯಾನದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನನ್ನು ತಿಳಿದುಕೊಂಡಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಅಲ್ಲದೆ ವಾಹನ ಚಾಲನಾ ನಿಯಮ , ವಾಹನ ಖರೀದಿ ಮತ್ತು ಮಾರಾಟ ಬಾಲ್ಯವಿವಾಹ ತಡೆ ಕಾನೂನು, ಬಾಲ ಕಾರ್ಮಿಕತನ , ವರದಕ್ಷಿಣೆ ನಿಷೇಧ ಕಾನೂನು , ಆಸ್ತಿಪರಬಾರೆ, ಜನನಮರಣ ನೋಂದಣಿ, ಭ್ರಷ್ಟಾಚಾರ ಹಾಗೂ ಮಾಹಿತಿ ಹಕ್ಕಿನಿಂದ ಒಳಗೊಂಡು ಎಲ್ಲಾ ಹಕ್ಕು ಕರ್ತವ್ಯಗಳ ಬಗ್ಗೆ ವಿವರವಾದ ಮಾಹಿಗಳನ್ನು ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಸಂಪನ್ಮೂಲ ವ್ಯಕ್ತಿ ಅಶ್ವನಿ ಕುಮಾರ್ ರೈ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ಕಾನೂನು ತಿಳಿದಿದ್ದಲ್ಲಿ ಪ್ರಾಣವನ್ನು ಕೂಡಾ ಉಳಿಸಿಕೊಳ್ಳಲು ಸಾಧ್ಯ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ವಿ.ಶೆಣೈ ನುಡಿದರು.
ಕಾನೂನು ಜಾಗೃತಿ ಮೂಡಿಸುವಲ್ಲಿ ಮಾಡುತ್ತಿರುವ ಇಂತಹಾ ಕಾರ್ಯಕ್ರಮಗಳು ಸ್ತುತ್ಯರ್ಹವಾದದಲ್ಲದೆ ಕಾಲಬುಡಕ್ಕೆ ಕಾನೂನು ಸಾಕ್ಷರತೆಯನ್ನು ಒಯ್ಯುತ್ತಿರುವ ಸಂಘ ಸಂಸ್ಥೆಗಳ ಕಾಂರ್ಯವೈಖರಿಯನ್ನು ಮೊಹಿಯುದ್ದೀನ್ ಎಜುಕೇಶನ್ ಟ್ರಸ್ಟ್ ನ ಧರ್ಮದರ್ಶಿ ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಹಾಯಕ ಸರಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ಸಹಾಯಕ ಸರಕಾರಿ ಅಭಿಯೋಜಕರಾದ ಎಂ.ಎಸ್.ಆಲಿ, ಎಸ್.ಕೆ.ಪಿ.ಎ ಅಧ್ಯಕ್ಷ ಸುಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ತುಂಬೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿದರು. ತುಂಬೆ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಕೆದಿಲ ವಂದಿಸಿದರು. ಉಪನ್ಯಾಸಕ ವಿ.ಸು.ಭಟ್ ಕಾರ್ಯಕ್ರಮ ನಿರ್ವಹಿಸಿದರು.

