ಬಂಟ್ವಾಳ: ನ.24 ಶ್ರೀಮಹಾಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜೀಪ ಮೂಡ ಗ್ರಾಮ ಅಂದಾಜು 1 ಕೋ.ರೂ. ವೆಚ್ಚದಲ್ಲಿ ಪುನರ್ ನಿರ್ಮಾಣದ ಅಂಗವಾಗಿ ಡಿ.7ರಂದು ಬುಧವಾರ 8.44ಕ್ಕೆ ಪಾದುಕಾನ್ಯಾಸ ನಂತರ ಅಥರ್ವಶೀರ್ಷ ಹೋಮ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದೆ. ಇದರ ಆಮಂತ್ರಣ ಪತ್ರವನ್ನು ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು ಇದರ ಪ್ರಧಾನ ಅರ್ಚಕ ಅನುವಂಶಿಕ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿಗಳು ಬಿಡುಗಡೆ ಮಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ದೇರಾಜೆಗುತ್ತು ,ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್,ಸುರೇಶ್ ಬಂಗೇರ,ಪ್ರೇಮಾ ಜಿ.ಶೆಟ್ಟಿ,ದೇವಿಪ್ರಸಾದ್ ಪೂಂಜ,ಜಯಶಂಕರ ಬಾಸ್ರಿತ್ತಾಯ,ಕೆ.ಸದಾನಂದ ಶೆಟ್ಟಿ,ಮಹಾಬಲ ಕೊಟ್ಟಾರಿ ಎಂ.,ಮಂಗಳೂರು ಕಟ್ಟಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

