ಮಂಗಳೂರು: ಪ್ರಜ್ಞಾ ಸಲಹಾ ಕೆಂದ್ರ ಕಂಕನಾಡಿ ಮಂಗಳೂರು , ಪ್ರೇರಣಾ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ,ತೊಕ್ಕೊಟ್ಟು ವಲಯ ,ದ .ಕ ಜಿ.ಪಂ.ಹಿ .ಪ್ರಾ ಶಾಲೆ ರಾಜಗುಡ್ಡೆ ಹಾಗು ಕೆ .ಎಂ .ಸಿ.ಆಸ್ಪತ್ರೆ ಅತ್ತಾವರ ಮಂಗಳೂರ್ ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ವು ರಾಜಗುಡ್ಡೆ ಶಾಲೆಯ ವಠಾರದಲ್ಲಿ ಇತ್ತೀಚೆಗೆ ನಡೆಯಿತು .
ಈ ಶಿಬಿರ ದಲ್ಲಿ ಸಾಮನ್ಯ ರೋಗ ತಪಾಸಣಾ , ಕಣ್ಣಿನ ತಪಾಸಣಾ , ಕಿವಿ, ಮೂಗು , ಗಂಟಲು ತಪಾಸಣಾ , ಮಕ್ಕಳ ತಪಾಸಣಾ , ಎಲುಬು ರೋಗ ತಪಾಸಣಾ , ಸ್ತ್ರೀ ರೋಗ ತಪಾಸಣಾ ,ಮದುಮೇಹ ತಪಾಸಣೆಯನ್ನು ಕೆ .ಎಂ .ಸಿ ಯ ತಜ್ಞ ವೈದ್ಯರು ನಡೆಸಿ ಕೊಟ್ಟರು . ೩೩ ಮಂದಿ ಶಿಬಿರಾರ್ಥಿ ಗಳಿಗೆ ರಿಯಾಯಿತಿ ದರ ದಲ್ಲಿ ಕನ್ನಡಕ ವಿತರಿಸಲಾಯಿತು.೧೮೦ ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದು ಕೊಂಡರು.


ಪ್ರಜ್ಞಾ ಸಲಹಾ ಕೇಂದ್ರದ ಪ್ರದೀಪ ಕಾಮತ್ , ಸುನಿತಾ ನಾಯ್ಕ್ , ಸವಿತಾ ,ಶಾಲಾ ಮುಖ್ಯ ಶಿಕ್ಷಕಿ ವಿನೋದ ,ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶಾಂತ ಹಾಗೂ ಶಾಲಾ ಶಿಕ್ಷಕ ವೃಂದ ಹಾಗೂ ಸ್ಕೌಟ್ & ಗೈಡ್ ವಿದ್ಯಾರ್ಥಿಗಳು ಸಹಕರಿಸಿದರು.


