ಮಂಗಳೂರು: ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ವಿಸ್ತರಣಾ ನಿರ್ದೇಶಾಲಯ ಮತ್ಸ್ಯ ಸಂಪನ್ಮೂಲ ಹಾಗೂ ನಿರ್ವಹಣಾ ವಿಧಾನ, ಮೀನುಗಾರಿಕೆ ಮಹಾವಿದ್ಯಾಲಯ ಮಂಗಳೂರು ಇದರ ಆಶ್ರಯದಲ್ಲಿ ” ವಿಶ್ವ ಮೀನುಗಾರಿಕೆ ದಿನಾಚರಣೆ”ಯ ಅಂಗವಾಗಿ ” ಜವಾಬ್ದಾರಿಯುತ ಮೀನುಗಾರಿಕೆ” ಎಂಬ ಜಾಗೃತಿ ಕಾರ್ಯಕ್ರಮವು ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯ ಪ್ರೊ. ಹೆಚ್. ಪಿ.ಸಿ. ಶೆಟ್ಟಿ ಸಭಾಂಗಣದಲ್ಲಿ ನ. 25ರಂದು ಜರಗಿತು.


