ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಶ್ರೀ ಅಖಿಲೇಶ್ವರ ದೆವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಇದರ ಪ್ರಥಮ ವರ್ಷದ “ಆಹೋರಾತ್ರಿ ಏಕಾಹ ಭಜನಾ ಮಹೋತ್ಸವ” ವು ನ.26 ರಂದು ಬೆಳಗ್ಗೆ 7.30ಕ್ಕೆ ದೀಪ ಬೆಳಗಿಸಿ ಉದ್ಘಾಟನೆಗೊಂಡಿತು.

ಶ್ರೀ ಅಖಿಲೇಶ್ವರ ದೆವಸ್ಥಾನದ ಮೊಕ್ತೆಸರ ಕೆ.ರಾಮ ಭಟ್ ಪೊಳಲಿ, ದೇವಳದ ಪ್ರಧಾನ ಅರ್ಚಕ ವಾಸುದೇವ ಮಯ್ಯ, ವಿಷ್ಣು ಮೂರ್ತಿ ನಟ್ಟೋಜ, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ, ವಿಶ್ವ ಹಿಂದೂ ಪರಿಷತ್ ಗುರುಪುರ ವಿಷ್ಣು ಕಾಮತ್, ಬೆಂಜನಪದವು ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಾಮೇಶ್,ಪೊಳಲಿ ವೆಂಕಟೇಶ್ ನಾವಡ, ಅಣ್ಣು ಪೂಜಾರಿ ಎಡಪದವು, ಮುಂಬೈ ಶ್ರೀ ಗುರುದೇವ ನಿತ್ಯಾನಂದ ಚಾಮುಂಡೇಶ್ವರೀ ದೇವಳದ ಮೊಕ್ತೆಸರಿ ರಜನಿ ಶೆಟ್ಟಿ ,ಓಂಕಾರ ಭಜನಾ ಮಂಡಳಿಯ ಅಧ್ಯಕ್ಷ ಜಿ ನಾರಾಯಣ ಹೊಳ್ಳ, ಪ್ರೇಮ್‍ನಾಥ , ಮುರಳಿ ಮತ್ತಿತರರು ಉಪಸ್ಥಿತರಿದ್ದರು. ನಾನಾ ಭಾಗದ 23 ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ.










