ಮಂಗಳೂರು: ಸುಮಾರು ನಾಲ್ಕು ವರ್ಷಗಳ ಹಿಂದೆ ಮಹಿಳೆಯೋರ್ವರಿಗೆ ಶಸ್ತ್ರ ಚಿಕಿತ್ಸೆಗೆ ನಡೆಸಿದ ವೈದ್ಯರು ಕತ್ತರಿಯನ್ನು ಹೊಟ್ಟೆಯಲ್ಲೇ ಇಟ್ಟ ಘಟನೆ ಕಳೆದ ಶನಿವಾರ ಬೆಳಕಿಗೆ ಬಂದಿದ್ದು, ಸೋಮವಾರ ರಾತ್ರಿ ನಗರದ ಯುನಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಕತ್ತರಿಯನ್ನು ಹೊಟ್ಟೆಯಿಂದ ಹೊರತೆಗೆಯಲಾಯಿತು.

kattari2 kattari
ರಾತ್ರಿ ಎಂಟು ಗಂಟೆಯ ಸುಮಾರಿಗೆ ಆರಂಭವಾದ ಶಸ್ತ್ರ ಚಿಕಿತ್ಸೆಯ ತಡರಾತ್ರಿ 11 ಗಂಟೆಯವರೆಗೂ ಮುಂದುವರಿದಿತ್ತು.
ತನಿಖೆ ಉದ್ದೇಶದಿಂದ ಪೊಲೀಸರು  ಕತ್ತರಿ ತೆಗೆಯುವ ಶಸ್ತ್ರ ಚಿಕಿತ್ಸೆಯನ್ನು ಸಂಪೂರ್ಣ ವಿಡಿಯೋ ಚಿತ್ರಿಕರಣ ಮಾಡಿಸಿದ್ದಾರೆ. ಹೊಟ್ಟೆಯಿಂದ ತೆಗೆದ ಕತ್ತರಿಯನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂದೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವಾಗ ಕತ್ತರಿಯನ್ನೂ ಸಹ ನ್ಯಾಯಾಲಯದ ವಶಕ್ಕೆ ಒಪ್ಪಿಸ-ಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಟೆಕಾರï ಸಮೀಪದ ಮಾಡೂರಿನ ಅಪ್ಸಾ ಎಂಬ ಮಹಿಳೆ 2010 ಫೆ. 22ರಂದು ಮಂಗಳೂರು ನರ್ಸಿಂಗï ಹೋಮïನಲ್ಲಿ ಗರ್ಭ-ಕೋಶದ ಶಸಚಿಕಿತ್ಸೆ ಮಾಡಿಸಿ-ಕೊಂಡಿದ್ದರು. ವೈದ್ಯರಾದ ಡಾ.ಪೂರ್ಣಿಮಾ ನಾಯರï ಮತ್ತು ಡಾ.ರೋಹನï ಗಟ್ಟಿ ಅಪರೇಷನï ಮಾಡಿ ಗರ್ಭಕೋಶದ ಗಡ್ಡೆ ತೆಗೆದಿದ್ದರು. ಈ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲೇ ಕತ್ತರಿಯನ್ನು ಹೊಟ್ಟೆಯೊಳಗೆ ಬಿಟ್ಟಿದ್ದರು. ಕತ್ತರಿಯಿಂದಾಗಿ ಹೊಟ್ಟೆ-ಯೊಳಗೆ ಸೋಂಕು ಉಂಟಾಗಿದ್ದು ಅದು ಇತ್ತೀಚೆಗೆ ದೇಹದ ಹೊರ-ಭಾಗಕ್ಕೂ ಆವರಿಸಿತ್ತು. ಸೋಂಕು ಹೆಚ್ಚಾದು ದರಿಂದ ಅಂದು ಶಸ್ತ್ರ ಚಿಕಿತ್ಸೆ ನಡೆಸಿದ ಡಾ. ಪೂರ್ಣಿಮಾರ ಸಲಹೆಯಂತೆ ಚರ್ಮರೋಗ ತಜ್ಞರಿಗೆ ತೋರಿಸಿದ್ದು ಅವರು ಸ್ಕ್ಯಾನಿಂಗ್ ಮಾಡಲು ಸಲಹೆ ನೀಡಿದ್ದರು. ಸ್ಕ್ಯಾನಿಂಗ್ ಮಾಡಿದಾಗ ಅಚ್ಚರಿ ಕಾದಿತ್ತು. ಹೊಟ್ಟೆಯಲ್ಲಿ ಕತ್ತರಿ ಕಾಣುತ್ತಿತ್ತು. ಹಪ್ಸಾ ಅವರು ಕದ್ರಿ ಪೊಲೀಸರು  ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರ ದಲ್ಲಿ ಪೆÇಲೀಸರು ತನಿಖೆ ನಡೆಸು ತ್ತಿದ್ದಾರೆ. ವಿಶೇಷ ಮತ್ತು ಅಪರೂಪದ ಪ್ರಕರಣವಾಗಿರುವುದರಿಂದ ಪೊಲೀಸರು  ತನಿಖೆಗೆ ಸಹಕಾರಿಯಾಗಿ ವೈದ್ಯರ ಮತ್ತು ಸಲಹೆ ಪಡೆಯುತ್ತಿದ್ದಾರೆ. ಮಹಿಳೆ ನಾಲ್ಕು ವರ್ಷದ ಮಧ್ಯದ ಅವಧಿಯಲ್ಲಿ ಬೇರೆ ಇನ್ನೆಲ್ಲಿಯಾದರೂ ಶಸ್ತ್ರ ಚಿಕಿತ್ಸೆ ಮಾಡಿಕೊಂಡದ್ದರೆ, ಸಂತೃಸ್ತ ಮಹಿಳೆ ತಿಳಿಸಿದ ದಿನಗಳಲ್ಲೇ ಮಂಗಳೂರು ನರ್ಸಿಂಗ್ ಹೋಮ್‍ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತೆ. ಅಂದು ಶಸ್ತ್ರ ಚಿಕಿತ್ಸೆ ನಡೆಸಲಾದ ಜಾಗ ಮತ್ತು ಇಂದು ಕತ್ತರಿ ದೊರೆತಿರುವ ಜಾಗದಲ್ಲಿ. ಹೊಂದಾಣಿಕೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ದೊಡ್ಡ ಕರುಳಿಗೆ ಹಾನಿ: ನಾಲ್ಕು ವರ್ಷಗಳಿಂದ ಹೊಟ್ಟೆಯಲ್ಲಿದ್ದುದರಿಂದ ಕತ್ತರಿ ತುಕ್ಕು ಹಿಡಿದಿದೆ. ದೊಡ್ಡ ಕರುಳಿಗೆ ಹಾನಿಯಾಗಿದೆ. ದೊಡ್ಡ ಕರುಳಿಂದ ಸಣ್ಣ ಕರುಳಿನ ಸಂಪರ್ಕ ತಪ್ಪಿಸಲಾಗಿದೆ. ದೊಡ್ಡ ಕರುಳಿನ ಗಾಯ ಮಾಯುವವರೆಗೆ ಕಾದು ಬಳಿಕ ಸಣ್ಣ ಕರುಳನ್ನು ಜೋಡಿಸಲಾಗುವುದು. 72 ಗಂಟೆಗಳ ಕಾಲ ವಿಶೇಷ ನಿಘಾ ಘಟಕದಲ್ಲಿ ಇಡಲಾಗುತ್ತದೆ. ಹಪ್ಸಾ ಸುಸ್ಥಿತಿಗೆ ಬರಲು ಇನ್ನೂ 15ರಿಂದ 20 ದಿನಗಳಾದರೂ ಬೇಕಾಗುತ್ತದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ಡಾ.ಅಬ್ದುಲ್ ಮಜೀದ್ ತಿಳಿಸಿದ್ದಾರೆ.
ಕತ್ತರಿಯನ್ನು ಹಪ್ಸಾರ ಪತಿ ಹಾಗೂ ಸಹೋದರಿಗೆ ತೋರಿಸಲಾಗಿದೆ. ಬಳಿಕ ಕತ್ತರಿಯನ್ನು ಕದ್ರಿ ಪೊಲೀಸರು ಇನ್‍ಸ್ಪಕ್ಟರ್ ಟಿ.ಡಿ.ನಾಗರಾಜ್ ವಶಕ್ಕೆ ಒಪ್ಪಿಸಲಾಗಿದೆ.
ಬಂಧನಕ್ಕೆ ಆಗ್ರಹ: ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟ ವೈದ್ಯರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಸಿರುವ ಹಪ್ಸಾ ಕುಟುಂಬಸ್ಥರು ಬಂಧಿಸದಿದ್ದರೆ ಪ್ರತಿಭಟಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

By suddi9

Leave a Reply

Your email address will not be published. Required fields are marked *