ಕೈಕಂಬ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕ್ರೀಡೆಯು ಸ್ಪರ್ಧಾತ್ಮಕ ಅವಕಾಶಗಳು ಒಂದು ಒಳ್ಳೆಯ ವೇದಿಕೆಯಾಗಿದೆ. ಈ ರೀತಿಯ ಅವಕಾಶಗಳು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಯಾಗಿರುವಾಗಲೇ ಸಿಗುವ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಕ್ರೀಡೆಯು ವಿದ್ಯಾರ್ಥಿಗಳ ಶಾರೀರಿಕ ಬೆಳವಣಿಗೆಗೆ ಅತೀ ಅವಶ್ಯಕವಾಗಿದೆ. ಕಾಲೇಜಿನ ಪ್ರತಿಯೊಂದು ವಿಭಾಗದ ವಿದ್ಯಾರ್ಥಿಗಳು ತಿಳಿಸುವ ಮೌಲ್ಯಗಳು ಉತ್ತಮ ಜೀವನಕ್ಕೆ ದ್ಯೋತಕವಾಗಿದೆ. ಇದು ನಾವೆಲ್ಲರೂ ಕ್ರೀಡೆಯಲ್ಲಿ ಒಂದೇ ಎನ್ನುವ ಭಾವನೆಯನ್ನು ತಿಳಿಸಿಕೊಡುವುದರ ಜೊತೆಗೆ ನಿಮಗೆಲ್ಲರಿಗೂ ದೇವರ ಆರ್ಶೀವಾದವು ಕೂಡಾ ಇದೆ ಎಂದು ವಂ. ಫಾ. ಸಿಪ್ರಿಯನ್ ಪಿಂಟೊ ರವರು ತಿಳಿಸಿದರು.
ಇವರು ನವೆಂಬರ್ 22ರಂದು ಸೈಂಟ್ ರೈಮಂಡ್ ಕಾಲೇಜಿನ ಕ್ರೀಡಾದಿನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ವಂ. ಸಿಸ್ಟರ್ ಲಿಲ್ಲಿಸ್ ಬಿ.ಎಸ್ ರವರು ಮಾತಾನಾಡುತ್ತಾ ಕ್ರೀಡೆಯು ವಿದ್ಯಾರ್ಥಿ ಜೀವನಕ್ಕೆ ಉತ್ತಮ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ಭವಿಷ್ಯತ್ತಿನಲ್ಲಿ ಹೇಗೆ ಇರಬೇಕು ಎನ್ನುವ ಶಿಸ್ತನ್ನು ತಿಳಿಸಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಮುಖ್ಯವಾಗಿ ಬೇಕು ಈ ಶಿಸ್ತನ್ನು ಕಾಲೇಜಿನ ಪ್ರತಿಯೊಬ್ಬ ಪಾದ್ಯಾಪಕರು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟಿದ್ದಾರೆ ಎಂದರು. ಅತಿಥಿಗಳಾದ ಶ್ರೀ ನೊಯೊಲ್ ಲೋಬೊ ರವರು ಒಳಾಂಗಣ ಕ್ರೀಡೆ ಮತ್ತು ಹೊರಾಂಗಣ ಕ್ರೀಡೆ ಎಂದರೇನು? ಕ್ರೀಡೆಯ ಮಹತ್ವ, ಜೀವನದ ಶಿಸ್ತಿನ ಕ್ರಮವನ್ನು ಕ್ರೀಡೆಯು ಕಲಿಸಿಕೊಡುತ್ತದೆ ಎಂದೇಳಿದರು.

ಈ ಕಾರ್ಯಕ್ರಮದ ಗಣ್ಯ ಅತಿಥಿ ಸ್ಥಾನವನ್ನು ವಹಿಸಿ ವಂ. ಭ. ಸಿಸಿಲಿಯಾ ಮೆಂಡೊನ್ಸಾ ಮಾತನಾಡುತ್ತಾ ಕಠಿನ ಪರಿಶ್ರಮ, ಇನ್ನೊಬ್ಬರನ್ನು ಸರಿಯಾಗಿ ಅರ್ಥೈಸಿ ಕೊಳ್ಳುವಿಕೆ, ಶ್ರದ್ಧೆ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಮತ್ತು ಜೀವನದಲ್ಲಿ ನಮ್ಮನ್ನು ನಾವು ಗುರುತಿಸಿಕೊಂಡು ಉತ್ತಮ ಭವಿಷ್ಯವನ್ನು ಪಡೆಯಬಹುದೆಂದರು.
ಕ್ರೀಡೆಯು ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಕ್ರೀಡೆಯಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು ಅದಕ್ಕೆ ಸರಿಯಾದ ಅವಕಾಶಗಳನ್ನು ಇಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗಿದೆ ಎಂದು ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿಯು ಅತ್ಯಂತ ಮೌಲ್ಯಯುತವಾದದು. ಇದಕ್ಕೆ ಉತ್ತಮ ತರಭೇತಿ, ಶ್ರಮ, ಪ್ರೀತಿ ಮತ್ತು ನಿರ್ಣಯಿಸುವ ಸೇವಾ ಮನೋಭಾವವು ಯಾವಾಗಲು ಉತ್ತಮ ಯಶಸ್ವಿಗೆ ದಾರಿದೀಪವಾಗುತ್ತದೆ ಎಂದು ಜಾನ್ ಪಿಂಟೊರವರು ಅಭಿಪ್ರಾಯ ಪಟ್ಟರು.

ಸಮಾರಂಭದ ಗಣ್ಯ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ. ಭ ಸಾಧನ ಬಿಎಸ್ ರವರು ಮತ್ತು ದೈಹಿಕ ಶಿಕ್ಷಕರಾದ ಜಯರಾಮ್ ಗೌಡ, ಶಿಕ್ಷಕ – ರಕ್ಷಕ ಸಂಘದ ಆಶ್ರಫ್, ಮತ್ತು ಶಾಲಾ, ಪ್ರೌಢಾಶಾಲಾ ಮುಖ್ಯೋಪಾದಾಯರುಗಳು, ವೇದಿಕೆಯನ್ನು ಅಲಂಕರಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನ ಗೀತೆಯನ್ನು ಹಾಡಿದರು. ಕಾಲೇಜಿನ ಪ್ರಾಂಶುಪಾಲರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಲಿಖಿತಾರವರು ಕಾರ್ಯಕ್ರಮ ನಿರೂಪಿಸಿದರು. ಜಯರಾಮ್ ಗೌಡ ವಂದನಾರ್ಪಣೆಯನ್ನು ಮಾಡಿದರು. ಎಲ್ಲಾ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

