ಬಂಟ್ವಾಳ: ತಾಲ್ಲೂಕಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಾಲ್ಕನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಮೊಡಂಕಾಪು ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲೆ ವಿದ್ಯಾರ್ಥಿನಿ ಶರಣ್ಯ ಮತ್ತು ರಕ್ಷಾ ಇವರು ನಿರ್ಮಿಸಿದ ಸೋಲಾರ್ ಆಧಾರಿತ ‘ತುರ್ತು ಮೊಬೈಲ್ ಚಾರ್ಜರ್‘ ಸಾಧನವು ಬೆಂಗಳೂರಿನಲ್ಲಿ ಡಿ.13ರಿಂದ 19ರತನಕ ಎನ್ಸಿಆರ್ಟಿ ಆಯೋಜಿಸಿರುವ 43ನೇ ಜವಹರಲಾಲ್ ನೆಹರು ರಾಷ್ಟ್ರೀಯ ವಿಜ್ಞಾನ ಗಣಿತ ಮತ್ತು ಪರಿಸರದ ವಸ್ತು ಪ್ರದರ್ಶನಕ್ಕೆ ಆಯ್ಕೆಗೊಂಡಿದೆ ಎಂದು ಮುಖ್ಯಶಿಕ್ಷಕಿ ಭಗಿನಿ ಉಜ್ವಲ ಎ.ಸಿ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

